ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ ~ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

0
6

ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಶೀರೂರು ಮಠ, ಉಡುಪಿ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ನೇತೃತ್ವದಲ್ಲಿ, ಲಯನ್ಸ್ ಕ್ಲಬ್ ಮುನಿಯಾಲು ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸ್ಪರ್ಧೆ-2026 ಕಲರ್ಸ್ ಆಫ್ ಶ್ರೀ ಕೃಷ್ಣ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

:​ಪ್ರಥಮ 10,000/-​,​ ದ್ವಿತೀಯ 5,000/- ​ಹಾಗು 3,000/-​ ನಗದು ಬಹುಮಾನ ಮತ್ತು 5 ಸಮಾಧಾನಕರ ಬಹುಮಾನಗಳು, ಅಭಿನಂದನಾ ಪತ್ರ, ಸ್ಮರಣಿಕೆ​ ಗಳನ್ನೊಳಗೊಂಡಿದೆ.

ಸ್ಪರ್ಧೆಯ ನಿಯಮಗಳು:​ ಪ್ರತಿ ಸ್ಪರ್ಧಿಯು ಗರಿಷ್ಠ ನಾಲ್ಕು ಛಾಯಾಚಿತ್ರಗಳನ್ನು ಕಳುಹಿಸಬಹುದು.​ ಒಂದು ಛಾಯಾಚಿತ್ರದ ಗಾತ್ರ ಗರಿಷ್ಠ 4MBಗಿಂತ ಹೆಚ್ಚು ಮೀರಬಾರದು.​ – ಮೊಬೈಲ್ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಪೋಟೋಶಾಪ್ನಲ್ಲಿ ತಿರುಚಲಾದ ಮತ್ತು ವಾಟರ್ ಮಾರ್ಕ್ ಇದ್ದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.​ – ಒಂದು ಬಾರಿ ನೋಂದಣಿಯಾದ ಛಾಯಾಚಿತ್ರಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ.​ – ಛಾಯಾಚಿತ್ರವನ್ನು ಇಮೇಲ್ ಮೂಲಕ ಕಳುಹಿಸುವಾಗ ತಮ್ಮ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.​ ತೀರ್ಪುಗಾರರ ತೀರ್ಮಾನವೇ ಅಂತಿಮ.​ ಉಡುಪಿ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ (04-08-2026) ಹಾಗೂ ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಮಹೋತ್ಸವದ (05-08-2026) ಛಾಯಾಚಿತ್ರಗಳಿಗೆ ಮಾತ್ರ ಅವಕಾಶ.
ಛಾಯಾಚಿತ್ರವನ್ನು ಕಳುಹಿಸಲು ಕೊನೆಯ ದಿನಾಂಕ 15-09-2026.​ – ಫಲಿತಾಂಶವನ್ನು ದಿನಾಂಕ 25-09-2026 ರಂದು ಪ್ರಕಟಿಸಲಾಗುವುದು.

ಛಾಯಾಚಿತ್ರಗಳನ್ನು ಕಳುಹಿಸಬೇಕಾದ ವಿಳಾಸ: rameshyelluru@gmail.com​, ನೋಂದಾಯಿಸಲು ಕೊನೆಯ ದಿನಾಂಕ 01-09-2026 ನೋಂದಾಯಿಸಿದ ಎಲ್ಲಾ ಛಾಯಾಗ್ರಾಹಕರಿಗೆ ಒಂದು ಟಿ-ಶರ್ಟ್ ಉಚಿತ.​ ಟಿ-ಶರ್ಟ್ ಧರಿಸಿ ಛಾಯಾಗ್ರಹಣವನ್ನು ಮಾಡತಕ್ಕದ್ದು.​ ಛಾಯಾಚಿತ್ರವನ್ನು ಯಾವುದೇ ಪೂರ್ವಾನುಮತಿ ಇಲ್ಲದೆ ಬಳಸುವ ಹಕ್ಕನ್ನು ಪಡೆದಿರುತ್ತೇವೆ.

​ಚಿತ್ರ : ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪ್ರಚಾರದ ಬಿತ್ತಿ ಚಿತ್ರವನ್ನು ಪರ್ಯಾಯ ಶೀರೂರು ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬುಧವಾರದಂದು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಎಸ್ ಕೆಪಿಎ ಉಡುಪಿ ವಲಯದ ಅಧ್ಯಕ್ಷ ದಿವಾಕರ್ ಹಿರಿಯಡ್ಕ, ಮಾಜಿ ಅಧ್ಯಕ್ಷ ಜನಾರ್ದನ್ ಕೊಡವೂರು, ಸದಸ್ಯರಾದ ರತನ್ ಶೆಟ್ಟಿ, ಶ್ರೀಶ ಬಲ್ಲಾಳ್ ಹಾಗು ಶ್ರೀಮಠದ ಛಾಯಾಗ್ರಾಹಕ ಕೃತಿಕ್ ಭಟ್ ಉಪಸ್ಥಿತರಿದ್ದರು.