ಉಡುಪಿ : 172 ನೇ ಗುರುಜಯಂತಿ ಕಾರ್ಯಕ್ರಮ

0
11

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಇಂದಿರಾ ನಗರ ಕುಕ್ಕಿಕಟ್ಟೆ ಉಡುಪಿ ಇವರ ವತಿಯಿಂದ 172 ನೇ ಗುರುಜಯಂತಿ ಕಾರ್ಯಕ್ರಮವು 28-08-2026 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜರುಗಿತು.

ಈ ಸಂಧರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಪ್ರಕಾಶ್ ಚಂದ್ರ ಬೈಲೂರು ಸ್ವಾಗತಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು.

ದೈವರಾಧಕರು ಹಾಗೂ ಸಮಾಜ ಚಿಂತಕರಾದ ಹರಿಶ್ಚಂದ್ರ ಪೂಜಾರಿ ಮೇಲ್ಮನೆ ಹೆರ್ಗ ಧಾರ್ಮಿಕ ಉಪನ್ಯಾಸ ನೀಡಿದರು. ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ರಿ. ಇದರ ಅಧ್ಯಕ್ಷರಾದ ಪ್ರವೀಣ್ ಎಮ್ ಪೂಜಾರಿ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಅಲೆವೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ, ವಿಶ್ವ ಇಂಡಸ್ಟ್ರೀಸ್ ಅಲೆವೂರು ಇದರ ಮಾಲೀಕರಾದ ಯತೀಶ್ ಕುಮಾರ್ ಅಲೆಯೂರು,
ನಿರ್ಮಲ ಬಾರ್ & ರೆಸ್ಟೋರೆಂಟ್ ಜೋಡುರಸ್ತೆ ಅಲೆವೂರು ಇದರ ಮಾಲಿಕ ಜಗದೀಶ್ ಕೆ ಕುಂದರ್ ಕಟಪಾಡಿ, ರವಿ ಪೂಜಾರಿ ದೆಂದೂರು ಕಟ್ಟೆ ಮಣಿಪುರ,ಆನಂದ್ ಅಂಚನ್ ಕಿನ್ನಿ ಮುಲ್ಕಿ ಉಡುಪಿ,ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಚನ್ ಅಲೆವೂರು, ಯಶೋಧ ವಿಜಯ ಪಾಲನ್, ಗುರು ಮಂದಿರದ ಪ್ರಧಾನ ಅರ್ಚಕ ಎಂ ಸುಂದರ್ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕರಿಗೆ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಬಿಲ್ಲವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಪರಿಸರದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಭಕ್ತಿ ಗೀತೆ ಸ್ಪರ್ಧೆ, ಭಾಷಣ ಸ್ಪರ್ಧೆ ಮತ್ತು ಗುರುವರ್ಯರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.