ದಾವಣಗೆರೆ : ಬೆಳಗಿನ ಜಾವ ಮಹಿಳೆಯರಿಗೆ ಮನೆ ಕೆಲಸದ ಒತ್ತಡ ಸಹಜ, ಆದರೂ ಸವಿತಾ ವಿಜಯ ಕೂಲಂಬಿಯವರು ಶ್ರೀ ಗಾಯತ್ರಿ ಪರಿವಾರದ ನೂಲು ಹುಣ್ಣಿಮೆಯ ದಿನ ಸಮಯಪ್ರಜ್ಞೆಯೊಂದಿಗೆ ರಕ್ಷಾ ಬಂಧನದ ಪೂರ್ವ ಸಿದ್ಧತೆಯೊಂದಿಗೆ ಬೆಳಗಿನ ಜಾವ ತಮ್ಮ ಕುಟುಂಬದವರನ್ನು ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ಕರೆ ತಂದು ಸಂಸ್ಕಾರ, ಸಂಸ್ಕೃತಿ ಇತರ ಮಹಿಳೆಯರಿಗೆ ಮಾದರಿ ಎಂದು ಕಲಾಕುಂಚದ ಸಂಸ್ಥಾಪಕರಾದ ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ಶೆಣೈ ತಮ್ಮ ಮನದಾಳದ ಮಾತು ಹಂಚಿಕೊಂಡರು.
ಸವಿತಾ ವಿಜಯ ಕೂಲಂಬಿಯವರು ಎಲ್ಲಾ ಅಣ್ಣ-ತಮ್ಮಂದಿರಿಗೆ, ಹಿರಿಯರಿಗೆ, ಕಿರಿಯರಿಗೆ ರಕ್ಷಾ ಬಂಧನ ಪ್ರಯುಕ್ತ ಅಭಿಮಾನದಿಂದ ಅಭಿನಂದಿಸಿ ಹಿರಿಯರಿಗೆ ಕಾಲಿಗೆ ನಮಸ್ಕಾರ ಮಾಡಿ ರಾಖಿ ಕಟ್ಟಿ, ಆರತಿ ಬೆಳಗಿ ಸಿಹಿ ಹಂಚಿದರು.
ಗಾಯಿತ್ರಿ ಪರಿವಾರದ ಗೌರವ ಅಧ್ಯಕ್ಷರಾದ ಡಾ|| ರಮೇಶ್ ಪಾಟೀಲ್, ಕೆ.ಹೆಚ್. ಮಂಜುನಾಥ್, ಸತೀಶ್ ಆರ್.ಎಂ., ವಿ.ಕೃಷ್ಣಮೂರ್ತಿ, ಸತ್ಯನಾರಾಯಣ ಮೂರ್ತಿ, ಎಂ.ಎಸ್.ಪ್ರಸಾದ್, ನಾಗರಾಜ್, ಆರ್.ಜಿ.ಮೃತ್ಯುಂಜಯ, ಶಿವಕುಮಾರ್ ಮುಂತಾದವರು ಸಂತೋಷ ಪಟ್ಟು ಶ್ರೀ ಗಾಯತ್ರಿ ಪರಿವಾರದ ಈ ಸಂಸ್ಥೆಯಲ್ಲಿ ಈ ಸಂಸ್ಕಾರ ಮೊಟ್ಟ ಮೊದಲು ಅಚರಿಸಿದ್ದು ಶ್ರೀಮತಿ ಸವಿತಾ ವಿಜಯ ಕೂಲಂಬಿಯವರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.

