ಉಡುಪಿ : ಕಳ್ತೂರು ಗ್ರಾಮ ಗ್ರಾಮ ಪಂಚಾಯತ್ ಕೆಂಜೂರಿನಲ್ಲಿ ಸುಮಾರು 65 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನತೆಯ ಆರೋಗ್ಯ ಸೇವೆಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಸುಮಾರು 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಆಯುಷ್ಮಾನ್ ಆರೋಗ್ಯ ಕೇಂದ್ರದ ಮೂಲಕ ಸ್ಥಳೀಯ ಜನತೆಗೆ ಉತ್ತಮ ಸೇವೆಯ ಜೊತೆಗೆ ಉತ್ತಮ ಆರೋಗ್ಯವಂತ ಸಮಾಜದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರತಾಪ ಹೆಗ್ಡೆ ಮಾರಾಳಿ, ವೈದ್ಯಾಧಿಕಾರಿ ಡಾ ಸವಿತಾ ಕುಂದರ್ , ಸ್ಥಳೀಯ ಮುಖಂಡರಾದ ಆದರ್ಶ್ ಶೆಟ್ಟಿ ಕೆಂಜೂರು, ದಿನೇಶ ಶೆಟ್ಟಿ, ರಮಾನಂದ ಶೆಟ್ಟಿ, ನಾಗೇಶ ನಾಯಕ್, ಉಷಾ ಪೂಜಾರಿ, ಮನೋಜ ಕುಮಾರ್,ಹರೀಶ ಶೆಟ್ಟಿ, ರವಿಂದ್ರ ಪೂಜಾರಿ,ಉದಯ ಶೆಟ್ಟಿ , ಶಾಂತರಾಜ ಶೆಟ್ಟಿ, ನವೀನ ಚಂದ್ರ ಶೆಟ್ಟಿ, ನವೀನ ಪುತ್ರನ್, ರಘರಾಮ ಶೆಟ್ಟಿ, ಸತೀಶ್ ಶೆಟ್ಟಿ, ಶ್ರೀಕಾಂತ ಆಚಾರ್ಯ, ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

