ಕೊಡವೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳು ಇಂದಿನ ಧರ್ಮ ಸಂಘಟನೆಗೆ ಮಾದರಿಯಾಗಿವೆ ಎಂದು ನಿಕಟ ಪೂರ್ವ ನಗರಸಭಾ ಸದಸ್ಯ ಕೆ. ವಿಜಯ ಕೊಡವೂರು ಹೇಳಿದರು.

ಲಕ್ಷ್ಮೀನಗರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸ್ಪೃಶ್ಯತೆ, ಮೇಲು-ಕೀಳು ಜಾತಿ ಎಂಬ ತಾರತಮ್ಯಗಳು ಸಮಾಜದಲ್ಲಿ ಬೇರೂರಿದ್ದ ಸಂದರ್ಭದಲ್ಲಿ ನಾರಾಯಣ ಗುರುಗಳು ಸಮಾನತೆ ಹಾಗೂ ಮಾನವೀಯತೆಯ ಸಂದೇಶವನ್ನು ಸಾರಿದರು. ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವುದರ ಜೊತೆಗೆ, ವಿವಿಧ ಕಾರಣಗಳಿಂದ ಮತಾಂತರದತ್ತ ಸಾಗುತ್ತಿದ್ದ ಜನರ ಮನಪರಿವರ್ತನೆಗೆ ತಮ್ಮ ಕಾರ್ಯಗಳ ಮೂಲಕ ಪ್ರೇರಣೆಯಾದ ಮಹಾನ್ ವ್ಯಕ್ತಿ ನಾರಾಯಣ ಗುರುಗಳು ಎಂದು ಹೇಳಿದರು.

ಸಮಾಜದ ಒಳಿತಿಗಾಗಿ ನಾರಾಯಣ ಗುರುಗಳು ನೀಡಿದ ಸಂದೇಶ ಹಾಗೂ ಅವರ ಆದರ್ಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು. ಅಂತಹ ಮಹಾನ್ ಸಂತನ ಗುಣಗಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕೆ. ವಿಜಯ ಕೊಡವೂರು ತಿಳಿಸಿದರು.
ಕಾರ್ಯಕ್ರಮದಲ್ಲಿ , ಸುರೇಶ್ ಕೋಟ್ಯಾನ್, ಕೃಷ್ಣ ನಾಯ್ಕ್, ಭಾಸ್ಕರ್, ಸುಧಾಕರ್, ಸಂತೋಷ್, ರವಿರಾಜ್, ಶರತ್ ಶೆಟ್ಟಿ,ಅರುಣ್ ಕುಮಾರ್, ಕಮಲಾಕ್ಷ ರಿಕ್ಷಾ ಚಾಲಕ ಅಧ್ಯಕ್ಷರಾದ ಅಶೋಕ್ ಹಾಗೂ ಊರಿನ ಎಲ್ಲಾ ನಾಗರಿಕರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು. ಅಮಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

