
ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಮುಲ್ಕಿ ಮೂಡುಬಿದಿರೆ ಮಂಡಲ ವತಿಯಿಂದ ತಿಂಗಳ ಸಂಘಟನಾತ್ಮಕ ಸಭೆ ಹಾಗೂ ಗುರುವಂದನಾ ಕಾರ್ಯಕ್ರಮ ವನ್ನು ಪಕ್ಷದ ಕಚೇರಿ ವಿದ್ಯಾಗಿರಿಯಲ್ಲಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾದ ಅಧ್ಯಕ್ಷರಾದ ಪ್ರದೀಪ್ ಕುಮಾರ್, ಪ್ರಭಾರಿಗಳಾದ ಪ್ರಭಾಕರ್ ಕುಲಾಲ್, ಪ್ರಧಾನ ಕಾರ್ಯದರ್ಶಿಯಾದ ಹೇಮನಾಥ್ ಅಮೀನ್, ಕೋಶಾಧಿಕಾರಿ ದೀಕ್ಷಿತ್ ಪಣಪಿಲ, ಸದಸ್ಯರಾದ ಪ್ರವೀಣ್ ಆರ್, ಲೋಕೇಶ್ ಉಪಸ್ಥಿತಿ ಇದ್ದರು.
