ಬಸ್ರೂರಿನ ಕೋಟಿ ಚೆನ್ಯಯ್ಯ ಪಂಜುರ್ಲಿ ಗರಡಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವ

0
6

ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ವರ್ಷದ ಗುರು ಜಯಂತಿ ಉತ್ಸವ ದಿನಾಂಕ 03.09.2026 ರ ಗುರುವಾರ ಬಸ್ರೂರು ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯಲ್ಲಿ ನಡೆಯಿತು.

ಬಿಲ್ಲವ ಸಮಾಜ ಸೇವಾ ಸಂಘ ಬಸ್ರೂರು ವಲಯ ಇವರ ವತಿಯಿಂದ ನಡೆದ ಗುರು ಜಯಂತಿ ಉತ್ಸವ ಸಂಜೆ 6.30 ರಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪೂಜಾ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಕಾಳಿಗರಡಿ ಭಜನಾ ತಂಡ ಕೋಳ್ಕೇರಿ ಬಸ್ರೂರು ಇವರ ಕುಣಿತ ಹಾಗೂ ಕುಳಿತು ಭಜನಾ ಕಾರ್ಯಕ್ರಮ ನಡೆಯಿತು ತದ ನಂತರ ಪ್ರಸಾದ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಸ್ರೂರು ಬಿಲ್ಲವ ಸಂಘದ ಅಧ್ಯಕ್ಷರಾದ ಜಯಸೂರ್ಯ ಪೂಜಾರಿ,ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಜಿ ಪೂಜಾರಿ,ದೈವಸ್ಥಾನದ ಅಧ್ಯಕ್ಷರು ಬಿ.ಟಿ .ಮಂಜುನಾಥ ಪೂಜಾರಿ, ಕೇಶವ ಪೂಜಾರಿ,ಶಿವರಾಮ ಪೂಜಾರಿ , ನರಸಿಂಹ ಪೂಜಾರಿ, ಅಶೋಕ್ ಕೆರೆಕಟ್ಟೆ ,ಮಹಿಳಾ ಘಟಕದ ಅಧ್ಯಕ್ಷರಾದ ಬೇಬಿ ಶ್ರೀಕಾಂತ್,ಇವರೊಂದಿಗೆ ಬಿಲ್ಲವ ಸಮಾಜದ ಅನೇಕ ಮುಖಂಡರು ಭಾಗವಹಿಸಿದರು.