ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು ಮುಂಬಯಿ

0
41

18ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಧಾರ್ಮಿಕ ಸಭೆ


ಧಾರ್ಮಿಕ ಕಾರ್ಯದ ಮೂಲಕ ಮುಂಡ್ಕೂರು,ನಾನಿಲ್ತಾರ್ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಒಗ್ಗಟ್ಟಾಗಿದ್ದಾರೆ : ಹರೀಶ್ ಡಿ ಮೂಲ್ಯನಾನಿಲ್ತಾರ್‌

ಮುಂಬೈ : ಧಾರ್ಮಿಕ ಕಾರ್ಯಕ್ರಮ ಮೂಲಕ 18 ವರ್ಷಗಳಿಂದ ನಾನಿಲ್ತಾರ್ ಪರಿಸರದ ಮುಂಬೈಯಲ್ಲಿ ಇರುವ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಈ ಕಾರ್ಯವನ್ನು ಮಾಡುತ್ತಿದ್ದೇವೆ. ಪುಣ್ಯಕಾರ್ಯದಲ್ಲಿ ಅಪಾರ ಭಕ್ತರು ಸಹಕಾರ ನೀಡಿದ್ದಾರೆ ಅವರೆಲ್ಲರೂ ಬೆಂಬಲದಿಂದ ವರ್ಷ ವರ್ಷ ವೈಭವದಿಂದ ಪೂಜೆಯನ್ನು ನಡೆಸಲು ಸಾಧ್ಯವಾಗಿದೆ. ಧಾರ್ಮಿಕ ಕಾರ್ಯದ ಮೂಲಕ ಮುಂಡ್ಕೂರು, ಅಲ್ಲದೆ ನಾನಿಲ್ತಾರ್ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಒಗ್ಗಟ್ಟಾಗಿದ್ದಾರೆ ಒಗ್ಗಟ್ಟಾಗುತ್ತಿದ್ದಾರೆ ಎಂದುನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು. ಮುಂಬೈ ಅಧ್ಯಕ್ಷ ಹರೀಶ್ ಡಿ ಮೂಲ್ಯ ತಿಳಿಸಿದರು.

ಆಗಸ್ಟ್ 30, ರಂದು ಗೋಮಾಂತಕ್ ಸೇವಾ ಸಂಘ, ಗೋಮಾಂತಕ್ ಚೌಕ್, ಮಾಳವೀಯ ರಸ್ತೆ, ವಿಲೇ ಪಾರ್ಲೆ ಪೂರ್ವ ಮುಂಬಯಿ ಇಲ್ಲಿ ನಡೆದ
ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು. ಮುಂಬೈ ಇವರ 18ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಮೊದಲು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಖ್ಯ ಅತಿಥಿ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ. ಸಾಲ್ಯಾನ್ ಮಾತನಾಡುತ್ತಾ ಈ ಸಂಸ್ಥೆಯಲ್ಲಿ ಬಹಳಷ್ಟು ಕುಲಾಲ್ ಸಮಾಜದ ಬಂಧುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವುದು ಕಂಡಾಗ ಅಭಿಮಾನವಾಗುತ್ತದೆ ನಿಮ್ಮ ಈ ಧಾರ್ಮಿಕ ಸೇವಾಕಾರಿಗಳು ನಿರಂತರವಾಗಿರಲಿ. ಒಗ್ಗಟ್ಟಿನಿಂದ ಈ ಸಂಸ್ಥೆಯನ್ನು ಬಲಿಷ್ಠ ಗೊಳಿಸಿ ಎಂದರು.

ಕುಲಾಲ ಸಂಘ ಮುಂಬೈಯ ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯ ಧ್ಯಕ್ಷ. ಉದ್ಯಮಿ. ಕುಲಾಲ ಸಮಾಜದ ಮಹಾದಾನಿ ಸುನಿಲ್ ಸಾಲಿಯಾನ್ ಮಾತನಾಡುತ್ತಾ 18 ವರ್ಷಗಳಿಂದ ಬಳಗದ ಸೇವಾ ಕಾರ್ಯಗಳು ಅಭಿನಂದನೀಯ. ಧಾರ್ಮಿಕ ಸಾಮಾಜಿಕ ಸೇವಾ ಕಾರ್ಯಗಳನ್ನು ಬಹಳ ಶ್ರದ್ದೆ ಮಾಡಬೇಕು. ನಿಮ್ಮ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳಿಗೆ ನನ್ನ ಸದಾ ಬೆಂಬಲವಿದೆ ಎಂದು ನುಡಿದರು.

ನಾನಿಲ್ತಾರ್ ಕುಲಾಲ ಸಂಘ ಮುಂಡ್ಕೂರು ಅಧ್ಯಕ್ಷರಾದ ಜಯರಾಮ ಕುಲಾಲ್ ಮಾತನಾಡುತ್ತಾ ಈ ಸಂಸ್ಥೆ ಮೂಲಕನಾನಿಲ್ತಾರ್ ಕುಲಾಲ ಸಂಘಕ್ಕೆ ಬಹಳಷ್ಟು ಸಹಕಾರವಾಗಿದೆ. ಅಲ್ಲದೆ ನಮ್ಮ ಊರಿನ ಕುಲಾಲ ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಇಂದು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಈ ಬಳಗದ ಮೂಲಕ ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವಂತಾಗಲಿ ಎಂದು ನುಡಿದರು.

ವೇದಿಕೆಯಲ್ಲಿ ಹೋಟೇಲು ಉದ್ಯಮಿ ಮೋಹನ್ ಶೆಟ್ಟಿ ಸಾಂತೂರು, .ಹೋಟೇಲು ಉದ್ಯಮಿ ಪದ್ಮನಾಭ ಬಂಗೇರ, ಸಮಾಜ ಸೇವಕಿ ಲತಾ ಕೃಷ್ಣ ಬಂಗೇರ ಮಾಹಿಮ್, ಸಾಕೀನಾಕಾದ ಸಮಾಜ ಸೇವಕಿ ರುಕ್ಮಿಣಿ ಯಶೋಧರ್ ಸಾಲ್ಯಾನ್, ಕುಲಾಲ ಸಂಘದ ಸಿ ಎಸ್ ಟಿ ಮುಳೂಂಡ್ ಸ್ಥಳೀಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಇಂದಿರಾ ಆರ್ ಬಂಜನ್, ಕುಲಾಲ ಸಂಘದ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್.ಗೋಪಾಲ ಸಾಲ್ಯಾನ್ ನಾಲಾಸೋಪರ್
ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ನವೀನ್ ಅಂಚನ್. ಮತ್ತು ನಾನಿಲ್ತಾರ್ ಅಭಿಮಾನಿ ಬಳಗದ ಸದಸ್ಯ ಲೋಕೇಶ್ ಸಾಲ್ಯಾನ್ ದಂಪತಿ, ಸಂಚಾಲಕ ಕೃಷ್ಣ ಎಸ್ ಮೂಲ್ಯ ನಾಲಾಸೋಪಾರ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಕೃಷ್ಣ ಮೂಲ್ಯ ನಿರೂಪಿಸಿದರು. ಸನ್ಮಾನಿತರ ಬಗ್ಗೆ ಸರೋಜಾ ಎಚ್ ಮೂಲ್ಯ. ನಲಿನಿ ಎನ್ ಬಂಜನ್.ಹೇಮಲಾತ ಬಂಗೇರ ಪರಿಚಯಿಸಿದರು.
ಕಾರ್ಯಕ್ರಮದ ಗಣ್ಯರಿಗೆ ಮತ್ತು ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ ಸಂಚಾಲಕರಾದ ಕೃಷ್ಣ ಮೂಲ್ಯ ನಾಲಾಸೋಪಾರ, ಉಪಾಧ್ಯಕ್ಶ ದಿನೇಶ್ ಮೂಲ್ಯ ಅಂಧೇರಿ, ಕಾರ್ಯದರ್ಶಿ ದಿನೇಶ್ ಬಂಗೇರ ಖಾರ್ ದಾಂಡ, ಕೋಶಾಧಿಕಾರಿ ರೋಹಿದಾಸ್ ಕೆ ಬಂಜನ್ ನಲಾಸೋಪಾರ, ಜೊತೆ ಕಾರ್ಯದರ್ಶಿಗಳಾದ ಲೋಕೇಶ್ ಮೂಲ್ಯ ಗೋರೆಗಾಂವ್, ಸದಾಶಿವ ಮೂಲ್ಯ ವಿರಾರ್, ಜೊತೆ ಕೋಶಾಧಿಕಾರಿಗಳಾ ವಿಶ್ವನಾಥ ಕುಂದರ್ ಅಂಧೇರಿ ಮತ್ತು ಶಶಿಕಾಂತ್ ಮೂಲ್ಯ ವಿರಾರ್, ಗೌರವಿಸಿದ್ದರು.

ಸಭೆಯಲ್ಲಿ ಊರಿನಿಂದ ಆಗಮಿಸಿದ ಸುರೇಂದ್ರ ಮೂಲ್ಯ. ಅಮಿತಾ ಅಂಚನ್ ಅಮೇರಿಕಾ ಹಾಗೂ ಕುಲಾಲ ಸಂಘ ಮುಂಬಯಿಯ ಸದಸ್ಯರು. ಕುಲಾಲ ಸಂಘದ
ಮೀರಾರೋಡ್ – ವಿರಾರ್ ಸ್ಥಳಿಯ ಸಮಿತಿಯ ಕಾರ್ಯಧ್ಯಕ್ಷ ಶಂಕರ್ ವೈ ಮುಲ್ಯ ಮುಂಡ್ಕೂರು ಮತ್ತು ಪದಾಧಿಕಾರಿಗಳು ಸದಸ್ಯರು . ಸಂಘದ ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಸದಸ್ಯರು. ಹಾಗೂ ಉದ್ಯಮಿಗಳು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನದ ನಂತರ ಪರಿಸರದ ವಿವಿಧ ಪ್ರತಿಭೆಗಳಿಂದ, ಬಳಗದ ಮಹಿಳೆಯರಿಂದ ಹಾಗೂ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.