ಮಕ್ಕಳಿಗೆ ಪಠ್ಯಗಳಲ್ಲಿ ಚುಟುಕು ಸಾಹಿತ್ಯ ಪರಿಚಯಿಸಲಿ : ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್​

0
13

ಉಡುಪಿ: ಪಠ್ಯಗಳಲ್ಲಿ ಚುಟುಕು ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯವನ್ನು ಕರ್ನಾಟಕ ಚುಟುಕು ಸಾಹಿತ್ಯ ಪರಿತ್ತು ಮಾಡಬೇಕು ಎಂದು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್​ ಹೇಳಿದರು.

ಭಾನುವಾರ ಭವಾನಿ ಸಭಾಂಗಣದಲ್ಲಿ ಜರುಗಿದ ರಾಜ್ಯಮಟ್ಟದ ಕಚುಸಾಪ 9ನೇ ಶಿಕ್ಷಕ&ಸಾಹಿತಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕನ್ನಡಕ್ಕೆ ಚುಟುಕು ಸಾಹಿತ್ಯ ಅತ್ಯಮೂಲ್ಯ ಕೊಡುಗೆ ನೀಡಿದೆ. ಅದನ್ನು ಮಕ್ಕಳಿಗೆ ತಿಳಿಸಿ, ಬೆಳೆಸುವ ಪ್ರಯತ್ನ ನಡೆಯಬೇಕಿದೆ ಎಂದು ಹೇಳಿದರು.

ಹಿರಿಯ ಶಿಕ್ಷಣ ತಜ್ಞ ಡಾ.ಆರ್​.ಎಂ.ಕುಬೇರಪ್ಪ ಅಧ್ಯಕ್ಷತೆ ವಹಿಸಿ, ಕಚುಸಾಪ ಅನೇಕ ಉದಯೋನ್ಮುಖ ಪ್ರತಿಭೆಗಳನ್ನು ಪರಿಚಯಿಸಿದೆ ಎಂದರು. ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎ.ಹೆಗಡೆ ಕನ್ನಡ ಬಾವುಟ ಹಸ್ತಾಂತರ ಮಾಡಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಉಡುಪಿ ಜಿಲ್ಲಾಧ್ಯಕ್ಷ ಪ್ರೊ. ಜಿ.ಯು.ನಾಯಕ ಮಾತನಾಡಿದರು. ವಾಣಿಶ್ರೀ ತಂಡ ನಾಡಗೀತೆ ಹಾಡಿದರು. ಜಿಲ್ಲಾ ಕಾರ್ಯದರ್ಶಿ ಎಚ್​.ಸೋಮಶೇಖರ್​ ಶೆಟ್ಟಿ ಸ್ವಾಗತಿಸಿದರು. ರಾಜೂ ಎನ್​ ಆಚಾರ್ಯ ವಂದಿಸಿದರು. ಉಡುಪಿ ನಿರೂಪಿಸಿದರು.

ಪ್ರಶಸ್ತಿ ಪ್ರದಾನ

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ವಿ.ಶೇಖರಶೆಟ್ಟಿ, ಬೇಲಾಡಿ ವಿಠ್ಠಲ ಶೆಟ್ಟಿ, ಅಶೋಕ ಕುಮಾರ ಶೆಟ್ಟಿ, ನಾಗಭೂಷಣ ಜೋಶಿ,ರಾಧಾಕೃಷ್ಣ ಉಪಾಧ್ಯಾಯ, ಸುರೇಶ ಮರಕಲ, ಮಹಮ್ಮದ ರಫೀಕ್​, ನರೇಶ ಕುಮಾರ ಎಂ.ಜಿ. ಶಶಿಕಲಾ ಕುಕನೂರು, ಶಶಿಕಲಾ ಶೇರೆಗಾರ, ನರೇಂದ್ರಕುಮಾರ್​, ವಸಂತ ನಾಯಕ, ಸೂರೀ ಭಟ್ಟ, ಕುಮಟಾ ಅಹಲ್ಯಾ ರಮಾನಂದ, ಶ್ರೀಕಾಂತ್​, ಕೆ.ವಿ. ರಾಜಾರಾಮ ಐತಾಳ, ಕೃಷ್ಣಮೊಯ್ಲಿ, ಜಿ.ಯು.ನಾಯಕ, ದಿನೇಶ ಶೆಟ್ಟಿಗಾರ ಅವರಿಗೆ ” ಗುರುಭ್ಯೋನಮ@ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಚಾರಗೋಷ್ಠಿ

ಸಭಾ ಕಾರ್ಯಕ್ರಮದ ನಂತರ ನಡೆದ ವಿಚಾರಗೋಷ್ಠಿಯಲ್ಲಿ ನರೇಂದ್ರ ಕುಮಾರ ಕೋಟ, ಶಶಿಕಲಾ ಕುಕನೂರ ಉಪನ್ಯಾಸ ನೀಡಿದರು. ಜಿ.ಯು.ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರೇಮಾ ಬಿರಾದಾರ ನಿರೂಪಿಸಿದರು. ಕಾಸರಗೋಡು ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ತಂಡದಿಂದ ನೃತ್ಯ ಸಂಗೀತ ವೈಭವ ಜರುಗಿತು. ಡಾ.ಕುಬೇರಪ್ಪ ಸಮಾರೋಪ ಭಾಷಣ ಮಾಡಿದರು.

ರ್ನಿಣಯ ಅಂಗೀಕಾರ

ರಾಜ್ಯ ಸರ್ಕಾರ ಕನ್ನಡ ಪ್ರಾಥಮಿಕ ಶಾಲೆಗಳ ಕಾಯಕಲ್ಪ ನೀಡಿಬೇಕು ಹಾಗೂ ತ್ರಿಭಾಷಾ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸುವ ರ್ನಿಣಯವನ್ನು ಕೃಷ್ಣಮೂರ್ತಿ ಕುಲಕರ್ಣಿ ಮಂಡಿಸಿದರು. ಸಭೆ ಸರ್ವಾನುಮತದಿಂದ ಅಂಗೀಕರಿಸಿತು.