ಬಹರೈನ್ : ಜಗನ್ನಾಥ್‌ ಶೆಟ್ಟಿ ಅವರ ನೇತೃತ್ವದಲ್ಲಿ ಬೈಕರ್ ಶರತ್ ಸಿರಿಗೆ ಗೌರವ ಸನ್ಮಾನ

0
34

ಜಗನ್ನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ : 35ಕ್ಕೂ ಅಧಿಕ ದೇಶಗಳಿಗೆ ಬೈಕ್‌ನಲ್ಲಿ ಸಂಚರಿಸಿ ‘ನೋ ಟು ಡ್ರಗ್ಸ್’ ಸಂದೇಶ ಸಾರುತ್ತಿರುವ ಶರತ್ ಸಿರಿ ಅವರಿಗೆ ಬಹ್ರೈನ್‌ನಲ್ಲಿ ಸನ್ಮಾನ

ಬಹ್ರೈನ್ : 35ಕ್ಕೂ ಅಧಿಕ ದೇಶಗಳಿಗೆ ಬೈಕ್‌ನಲ್ಲಿ ಸಂಚರಿಸಿ ಸ್ನೇಹ, ಸೌಹಾರ್ದತೆ ಹಾಗೂ ‘No to Drugs’ ಸಂದೇಶವನ್ನು ಸಾರುತ್ತಿರುವ 60ರ ಹರೆಯದ ಸಾಹಸಿ ಬೈಕರ್ ಶರತ್ ಸಿರಿ ಅವರನ್ನು ಬಹ್ರೈನ್‌ನಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಜಗನ್ನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ಬಹ್ರೈನ್‌ನ ಮನಂ ಸ್ವಾಗತ್ ರೆಸ್ಟೋರೆಂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರತ್ ಸಿರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಗನ್ನಾಥ್ ಶೆಟ್ಟಿ, ನಿತಿನ್ ಶೆಟ್ಟಿ, ಸುಮನ್ ಶೆಟ್ಟಿ, ಶ್ಯಾಮ್ ಭಾಟಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶರತ್ ಸಿರಿ ಅವರ 35ಕ್ಕೂ ಅಧಿಕ ದೇಶಗಳ ಸಾಹಸಮಯ ಬೈಕ್‌ ಪ್ರಯಾಣ, ಯುವಜನರಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಹಾಗೂ ಸ್ನೇಹ-ಮಾನವೀಯತೆಯ ಸಂದೇಶಕ್ಕೆ ಕಾರ್ಯಕ್ರಮದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಯಿತು.