ಕಾರ್ಕಳ ಸ್ಕೌಟ್ಸ್ ಗೈಡ್ ವಿದ್ಯಾರ್ಥಿಗಳಿಂದ ಗೀತಾ ಗಾಯನ ಸ್ಪರ್ಧೆ

0
23

ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ ಘಟಕದ ವತಿಯಿಂದ ಗೀತಾ ಗಾಯನ ಸ್ಪರ್ಧೆಯು ಕಾರ್ಕಳದ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜೋಡುರಸ್ತೆ ಕುಕ್ಕುಂದೂರು ಇಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಲೆಕ್ಕ ಪರಿಶೋಧಕ ಸಮಾಜ ಸೇವಕ ಕೆ ಕಮಲಾಕ್ಷ ಕಾಮತ್ ರವರು ದೀಪ ಪ್ರಜ್ವಲನೆ ಮಾಡಿ ಶುಭಾಶಯ ಕೋರಿದರು. ಸಭೆಯ ಅಧ್ಯಕ್ಷತೆಯನ್ನು ಜ್ಯೋತಿ ಜಿ ಪೈ ಯವರು ವಹಿಸಿ ವಿದ್ಯಾರ್ಥಿಗಳನ್ನು ಹರಸಿದರು. ವೇದಿಕೆಯಲ್ಲಿ ಸ್ಕೌಟ್ಸ್ ಗೈಡ್ಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ಉಪಾಧ್ಯಕ್ಷೆ ಸಾವಿತ್ರಿ ಮನೋಹರ್, ಕೋಶಾಧಿಕಾರಿ ಸತೀಶ್ ಶೆಟ್ಟಿ ,ಜಿಲ್ಲಾ ಸಹಾಯಕ ಆಯುಕ್ತೆ ವೃಂದಾ ಹರಿಪ್ರಕಾಶ್ ಶೆಟ್ಟಿ, ಬೋಳ ಗೀತಾ ಸುಧೀರ್ ಕಾಮತ್ ,ವತ್ಸಲಾ ಶಾನುಭೋಗ ,ಜ್ಯೋತಿ ಸುನೀಲ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ ಕಮಲಾಕ್ಷ ಕಾಮತ್ ಹಾಗೂ ಸ್ಕೌಟ್ ಗೈಡ್ ರಾಜ್ಯ ಸಂಸ್ಥೆ ಬಲವರ್ಧನ ಸಮಿತಿ ಸದಸ್ಯೆ ವಂದನಾ ರೈ ಕಾರ್ಕಳ ಇವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೊಟೆರಿಯನ್ ಡಾ ಭರತೇಶ್ ಉಪಸ್ಥಿತರಿದ್ದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು.

ಗೀತಾ ಗಾಯನ ಸ್ಪರ್ಧೆಯಲ್ಲಿ ಬನ್ನಿಸ್ ವಿಭಾಗದಲ್ಲಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಪ್ರಥಮ, ವರ್ಧಮಾನ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ದ್ವಿತೀಯ, ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಸ್ಕೂಲ್ ಕಾರ್ಕಳ ತೃತೀಯ , ಕಬ್ಸ್ ವಿಭಾಗದಲ್ಲಿ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಪ್ರಥಮ ,ವರ್ಧಮಾನ ಆಂಗ್ಲ ಮಾಧ್ಯಮ ಸ್ಕೂಲ್ ಕಾರ್ಕಳ ದ್ವಿತೀಯ, ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ತೃತೀಯ,ಸ್ಕೌಟ್ ವಿಭಾಗದಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಪ್ರಥಮ, ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ,ವರ್ಧಮಾನ ಆಂಗ್ಲ ಮಾಧ್ಯಮ ಸ್ಕೂಲು ತೃತೀಯ, ಗೈಡ್ಸ್ ವಿಭಾಗದಲ್ಲಿ ವರ್ಧಮಾನ ಆಂಗ್ಲ ಮಾಧ್ಯಮ ಸ್ಕೂಲ್ ಪ್ರಥಮ ,ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢ ಶಾಲೆ ಪೆರುವಾಜೆ ಕಾರ್ಕಳ ದ್ವಿತೀಯ ,ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ತೃತೀಯ ,ರೋವರ್ಸ್ ವಿಭಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಪ್ರಥಮ ,ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು ದ್ವಿತೀಯ ,ರೇಂಜರ್ಸ್ ವಿಭಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಪ್ರಥಮ, ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು ಕಾರ್ಕಳ ದ್ವಿತೀಯ ಬಹುಮಾನ ಪಡೆದುಕೊಂಡಿತು. 25 ಶಾಲಾ ಕಾಲೇಜುಗಳಿಂದ 424 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸ್ಥಳೀಯ ಸಂಸ್ಥೆ ಕೋಶಾಧಿಕಾರಿ ಸತೀಶ್ ಶೆಟ್ಟಿ ಸ್ವಾಗತಿಸಿ ನಿಕಟ ಪೂರ್ವ ಕಾರ್ಯದರ್ಶಿ ನವೀನ್ ಕುಮಾರ್ ಧನ್ಯವಾದವಿತ್ತರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು.