ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆ, ವಾರ್ಷಿಕೋತ್ಸವ

0
6

ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣ ಗುರು ಸೇವಾದಳ, ಶ್ರೀ ನಾರಾಯಣ ಗುರು ಮಹಿಳಾ ಘಟಕಗಳ ಆಶ್ರಯದಲ್ಲಿ ಸೆಪ್ಟೆಂಬರ್ 6 ರಂದು ಕಾಮಧೇನು ಸಭಾಭವನದಲ್ಲಿ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆ, ಮೂರ್ತಿ ಪ್ರತಿಷ್ಠಾಪನೆಯ 40ನೇ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಿತು. ಸಂಸದ ಬ್ರಿಜೇಶ್ ಚೌಟ ಸಂಘದ ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು ಅಭಿನಂದಿಸಿದರು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ದೀಪ ಬೆಳಗಿ ಮಾತನಾಡಿ ಲೋಕಸಂತ ನಾರಾಯಣ ಗುರುಗಳು ಜಗತ್ತಿನ ಮಹಾ ಮಹಾಮಹಿಮರುಗಳಲ್ಲಿ ಓರ್ವರು ಎಂದರು. ಕರ್ನಾಟಕ ಸರ್ಕಾರದ ಹೈಕೋರ್ಟ್ ಹೆಚ್ಚುವರಿ ಎಡ್ವೊಕೇಟ್ ಜನರಲ್ ಇರುವೈಲು ತಾರಾನಾಥ್ ಪೂಜಾರಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲವನ್ನು ನೀಡುವ ಭರವಸೆ ನೀಡಿದರು. ಪ್ರತಿಭೆಗಳು ಹುಟ್ಟುವುದು ಅರಮನೆಯಲ್ಲಲ್ಲ ಗುಡಿಸಲಿನಲ್ಲಿ ಎಂದು ಪ್ರೋತ್ಸಾಹದ ಮಾತನಾಡಿದರು.

ಸೇವಾ ಸಂಘದ ಅಧ್ಯಕ್ಷ ನವೀನ್ ಚಂದ್ರ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾದ ತುಳು ಸಾಹಿತ್ಯ ಅಕಾಡೆಮಿಯ ಪೂರ್ವ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ನಾರಾಯಣ ಗುರುಗಳ ಆದರ್ಶ, ತತ್ವಗಳನ್ನು ಜೀವನದಲ್ಲಿ, ಸಮಾಜದಲ್ಲಿ ಆಚರಿಸಲು ಕೇಳಿಕೊಂಡರು.

ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಪದ್ಮಯ್ಯ ಸುವರ್ಣ, ರವೀಂದ್ರ ಸುವರ್ಣ, ಪದ್ಮರಾಜ ಪೇರಿ, ಪದ್ಮನಾಭ ಸಾಲಿಯಾನ್ ರವರುಗಳನ್ನು ಸನ್ಮಾನಿಸಲಾಯಿತು.
ಚಿತ್ರಕಲೆ, ಅಭಿನಯ ಗೀತೆ, ಪ್ರಬಂಧ, ಜನಪದ ಗೀತೆ, ಛದ್ಮವೇಷ, ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ ಎಂ, ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಮಸ್ಕತ್ ಉದ್ಯಮಿ ರೋನಿ ಡಿಕುನ್ಹ, ಸೇವಾದಳದ ಅಧ್ಯಕ್ಷ ಶಶಿಕಿರಣ್ ಕಲ್ಲಬೆಟ್ಟು, ಮಹಿಳಾ ಘಟಕದ ಅಧ್ಯಕ್ಷ ಸವಿತಾ ಜಿತೇಶ್, ಉಪಾಧ್ಯಕ್ಷರುಗಳಾದ ಮುರಳಿಧರ ಕೋಟ್ಯಾನ್, ಸುಭಾಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ, ಲಕ್ಷ್ಮಣ್ ಪೂಜಾರಿ, ಕೋಶಾಧಿಕಾರಿ ನವಾನಂದ, ಲೆಕ್ಕ ಪರಿಶೋಧಕ ಪ್ರಭಾಕರ ಕರ್ಕೇರಾ, ಸಂಘಟನಾ ಕಾರ್ಯದರ್ಶಿ ಸದಾನಂ
ದ ಪೂಜಾರಿ, ಪ್ರಭಾಕರ ಸುವರ್ಣ, ಪ್ರಕಾಶ್ ಅಮೀನ್, ಶಶಿಧರ ಅಂಚನ್, ಉಷಾ ಮಧುಕರ, ಹಾಜರಿದ್ದರು.ಪ್ರಜ್ವಲ್ ಮಾರ್ನಾಡು, ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಕಾರ್ಯಕ್ರಮ ನಿರ್ವಹಿಸಿದರು.

ವರದಿ ರಾಯಿ ರಾಜ ಕುಮಾರ್
.