ಹೆಬ್ರಿ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಕೂಟ: ಅಮೃತಭಾರತಿ ಕಾಲೇಜು ಬಾಲಕರ ತಂಡ ರನ್ನರ್-ಅಪ್

0
3

ಹೆಬ್ರಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜು, ಹೆಬ್ರಿಯಲ್ಲಿ ನಡೆದ ಹೆಬ್ರಿ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಕೂಟದಲ್ಲಿ ಪಿ.ಆರ್.ಎನ್. ಅಮೃತಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿಯ ಬಾಲಕರ ತಂಡವು ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದು ರನ್ನರ್-ಅಪ್ ಆಗಿ ಹೊರಹೊಮ್ಮಿದೆ.

ಪಂದ್ಯಾಕೂಟದಲ್ಲಿ ಅಮೃತಭಾರತಿ ಕಾಲೇಜಿನ ಆಟಗಾರರು ತಂಡದ ಉತ್ತಮ ಸಮನ್ವಯ ಹಾಗೂ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಗಮನ ಸೆಳೆದರು. ತಂಡದ ಈ ಸಾಧನೆ ಕಾಲೇಜಿಗೆ ಹೆಮ್ಮೆ ತಂದಿದೆ.

ಬಾಲಕರ ವಿಭಾಗದಲ್ಲಿ ಪ್ರತೀಕ್, ಪ್ರಖ್ಯಾತ್, ನಂದೀಶ್ ಹಾಗೂ ಸೃಜನ್ ಆರಾಧ್ಯ ಅವರು ತಮ್ಮ ಉತ್ತಮ ಆಟದ ಮೂಲಕ ಜಿಲ್ಲಾ ಮಟ್ಟದ ಪಂದ್ಯಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳನ್ನು ಪಂದ್ಯಾಕೂಟಕ್ಕೆ ಸಿದ್ಧಪಡಿಸಿ ತರಬೇತಿ ನೀಡಿದ ದೈಹಿಕ ಶಿಕ್ಷಕಿ ಪಾವನ ಶೆಟ್ಟಿ ಅವರ ಪ್ರಯತ್ನವನ್ನು ಆಡಳಿತ ಮಂಡಳಿ ಹಾಗೂ ಕಾಲೇಜಿನ ಶಿಕ್ಷಕ ವೃಂದ ಶ್ಲಾಘಿಸಿದೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿ, ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.