ಮೂಡುಬಿದಿರೆ : ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ ನಡೆದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವು ಕ್ರೀಡಾಪಟುಗಳ ಉತ್ಸಾಹ ಹಾಗೂ ಕ್ರೀಡಾಸ್ಫೂರ್ತಿಯಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ರೋಟರಿ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ನಾಗರಾಜ್, ರೋಟರಿ ಕ್ಲಬ್ ಮೂಡುಬಿದಿರೆಯ ಅಧ್ಯಕ್ಷರಾದ ಡಾ. ಆಶೀರ್ವಾದ್ ಎಂ.ಪಿ ಹಾಗೂ ರೋಟರಿ ಕ್ಲಬ್ ಮೂಡಬಿದ್ರೆಯ ಕಾರ್ಯದರ್ಶಿಯವರಾದ ಪ್ರಜ್ವಲ್ ಆಚಾರ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ರೋಟರಿ ಸಂಸ್ಥೆಗಳ ಕೋಶಾಧಿಕಾರಿ ನಾಗರಾಜ್ ಬಿ ಮಾತನಾಡಿ ಪಂದ್ಯಾಟವು ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವುದರ ಜೊತೆಗೆ ಶಿಸ್ತು, ತಂಡಭಾವನೆ ಹಾಗೂ ಸೋಲು–ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ನ ಕಾರ್ಯದರ್ಶಿ ಪ್ರಜ್ವಲ್ ಆಚಾರ್ ಮಾತನಾಡಿ, ತಮ್ಮ ಬಾಲ್ಯದ ಕ್ರೀಡಾ ದಿನಗಳನ್ನು ನೆನಪಿಸಿಕೊಂಡು ಕ್ರೀಡೆಯಲ್ಲಿ ಗೆಲುವು–ಸೋಲು ಸಹಜವಾಗಿದ್ದು, ಸೋತವರು ನಿರಾಶರಾಗದೆ ಮುಂದಿನ ಸ್ಪರ್ಧೆಗಳಿಗೆ ಇನ್ನಷ್ಟು ಆತ್ಮವಿಶ್ವಾಸದಿಂದ ಸಿದ್ಧರಾಗಬೇಕು ಎಂದು ಹೇಳಿ ವಿಜೇತರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳನ್ನು ಅಭಿನಂದಿಸಿದರು.*
ರೋಟರಿ ಕ್ಲಬ್ ಮೂಡುಬಿದಿರೆಯ ಅಧ್ಯಕ್ಷರಾದ ಡಾಕ್ಟರ್ ಆಶೀರ್ವಾದ ಎಂಪಿ ಇವರು ಎಲ್ಲಾ ಅತಿಥಿಗಳ ಜೊತೆ ಸೇರಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು
ಪಂದ್ಯಾಟದ ವಿವಿಧ ಹಂತಗಳ ನಿರ್ವಹಣೆಯಲ್ಲಿ ಮೂಡುಬಿದಿರೆ ತಾಲ್ಲೂಕು ದೈಹಿಕ ಪರಿವೀಕ್ಷಣಾಧಿಕಾರಿಗಳಾದ ರಿತೇಶ್ ಶೆಟ್ಟಿ ಅವರು ಮಾರ್ಗದರ್ಶನ ನೀಡಿದರು.
ಬಹುಮಾನ ವಿತರಣಾ ಪಟ್ಟಿಯನ್ನು ರೋಟರಿ ಶಾಲಾ ದೈಹಿಕ ಶಿಕ್ಷಕ ಹಾಗೂ ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ವಾಚಿಸಿದರು.
ಹಿರಿಯ ಶಿಕ್ಷಕರುಗಳಾದ ನಾಗೇಶ್ , ಸುನಿಲ್ ಮಿರಾಂಡ, ನವೀನ್ ಚಂದ್ರ ಅಂಬೂರಿ , ಗಜಾನನ ಮರಾಠೆ , ಹರಿಶ್ಚಂದ್ರ , ಶಹನ್ ರಾಜ್ , ದೀಕ್ಷಿತ್ , ಸುನೀತಾ, ವೀಕ್ಷಕ ವಿವರಣೆಯಲ್ಲಿ ಹಾಗೂ ನಿರ್ವಹಣೆಯಲ್ಲಿ ಸಹಕರಿಸಿದರು.
ಮೂಡಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆಯಲ್ಲಿ ಸಹಕರಿಸಿದರು.
ದಿನವಿಡೀ ನಡೆದ ರೋಚಕ ಹಾಗೂ ಪೈಪೋಟಿಯಿಂದ ಕೂಡಿದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ತಂಡಗಳು,
U14 ವರ್ಷದ ಬಾಲಕರ ವಿಭಾಗ
ಪ್ರಥಮ:ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆ
ದ್ವಿತೀಯ:ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡಬಿದ್ರೆ
ಬೆಸ್ಟ್ ಆಲ್ ರೌಂಡರ್: ಶ್ರೀದಾಂತ್: ರೋಟರಿ ಆಂಗ್ಲ ಮಾಧ್ಯಮ ಶಾಲೆ
ಬೆಸ್ಟ್ ಅಟ್ಯಾಕರ್: ನಿಖಿಲ್ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ
ಬೆಸ್ಟ್ ಪಾಸರ್: ಇಶಾಂತ್ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ
U14 ಬಾಲಕಿಯರ ವಿಭಾಗ
ಪ್ರಥಮ: ಜೈನ್ ಪ್ರೌಢಶಾಲೆ ಮೂಡಬಿದ್ರೆ
ದ್ವಿತೀಯ:ಸ.ಮಾ.ಹಿ.ಪ್ರಾ.ಶಾಲೆ ಬೆಳುವಾಯಿ ಮೈನ್
ಬೆಸ್ಟ್ ಆಲ್ ರೌಂಡರ್: ತ್ರಿಶಾ ಸ.ಮಾ.ಹಿ.ಪ್ರಾ ಶಾಲೆ ಬೆಳುವಾಯಿ ಮೈನ್
ಬೆಸ್ಟ್ ಅಟ್ಯಾಕರ್: ವೀಕ್ಷ ಜೈನ ಪ್ರೌಢಶಾಲೆ ಮೂಡಬಿದ್ರಿ
ಬೆಸ್ಟ್ ಪಾಸರ್: ಸ್ತುತಿ ಜೈನ್ ಪ್ರೌಢಶಾಲೆ ಮೂಡಬಿದ್ರೆ
U -17 ವರ್ಷ ಬಾಲಕರ ವಿಭಾಗ
ಪ್ರಥಮ: ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ, ಮೂಡಬಿದ್ರಿ
ದ್ವಿತೀಯ: ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡಬಿದ್ರೆ
ಬೆಸ್ಟ್ ಆಲ್ ರೌಂಡರ್: ನಾಗರಾಜ್ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ.
ಬೆಸ್ಟ್ ಅಟ್ಯಾಕರ್: ದಿಗಂತ್ ಆಳ್ವಾಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪುತ್ತಿಗೆ
ಬೆಸ್ಟ್ ಪಾಸರ್: ಮಿಲನ್ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆ
U-17 ವರ್ಷದ ಬಾಲಕಿಯರ ವಿಭಾಗ
ಪ್ರಥಮ: ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ
ದ್ವಿತೀಯ: ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆ
ಬೆಸ್ಟ್ ಆಲ್ ರೌಂಡರ್: ಪ್ರಿಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತಿಗೆ
ಬೆಸ್ಟ್ ಅಟ್ಯಾಕರ್: ತನ್ವಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ
ಬೆಸ್ಟ್ ಪಾಸರ್: ಯುಕ್ತಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ
ಅತಿಥಿಗಳು ವಿಜೇತ ತಂಡಗಳಿಗೆ ಪ್ರಶಸ್ತಿ, ಪದಕ ಹಾಗೂ ಪಾರಿತೋಷಕಗಳನ್ನು ನೀಡಿ ಗೌರವಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ತಿಲಕಾ ಅನಂತವೀರ ಜೈನ್ ವಂದನಾರ್ಪಣೆಗೈದು ಪಂದ್ಯಾಟ ಯಶಸ್ವಿಗಾಗಿ ಸಹಕರಿಸಿದ , ಆಡಳಿತ ಮಂಡಳಿ, ಅತಿಥಿಗಳು , ಕ್ರೀಡಾಪಟುಗಳು, ಶಿಕ್ಷಕರು, ತಂಡ ವ್ಯವಸ್ಥಾಪಕರು, ತೀರ್ಪುಗಾರರು, ತರಬೇತುದಾರರು, ಶಾಲಾ ಸಿಬ್ಬಂದಿಗಳು , ಪೋಷಕರು , ಸ್ವಯಂ ಸೇವಕರು ಹಾಗೂ ಹಳೆ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿದರು.

