ದಯಾನಂದ ಶೆಟ್ಟಿ ಆರೋಗ್ಯ ವಿಚಾರಣೆ

0
8

ಮಂಗಳೂರು : ಇತ್ತೀಚೆಗೆ ರಸ್ತೆ ಅಪಘಾತಕ್ಕೊಳಗಾಗಿಚಿಕಿತ್ಸೆ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಸಕ್ರಿಯ ಸದಸ್ಯ ದಯಾನಂದ ಶೆಟ್ಟಿ ಅವರ ಮನೆಗೆ ರೆಡ್ ಕ್ರಾಸ್ ನಿಯೋಗ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

ಇಂಡಿಯನ್ ರೆಡ್ ಕ್ರಾಸ್ ನ ರಾಷ್ಟ್ರೀಯ ನಿರ್ವಹಣಾ ಮಂಡಲಿ ಇದರ ಸದಸ್ಯ ಡಾ.ಮುರಲೀ ಮೋಹನ್ ಚೂಂತಾರು ನೇತೃತ್ವದಲ್ಲಿ ದಯಾನಂದ್ ಅವರ ನಿವಾಸಕ್ಕೆ ಭೇಟಿ ನೀಡಿದ ತಂಡದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸದಸ್ಯರಾದ ಸಂತೋಷ್ ಪೀಟರ್, ಇಸ್ಮಾಯಿಲ್ ಬಬ್ಬುಕಟ್ಟೆ, ಬಿ.ವಿಷ್ಣುಮೂರ್ತಿ ಭಟ್‌, ಅಜಯ್ ಕುಮಾರ್ ಇದ್ದರು. ತಂಡದವರು ದಯಾನಂದ್‌ ಅವರ ಆರೋಗ್ಯ ವಿಚಾರಿಸಿ, ಅವರಿಗೆ ದೈರ್ಯ ತುಂಬಿ ಸಹಕಾರದ ಭರವಸೆ ನೀಡಿದರು.