32 ನೇ ವರ್ಷದ ರಾಜ್ಯಮಟ್ಟದ ಮುದ್ದು ಕೃಷ್ಣ ಸ್ಪರ್ಧೆ

0
4

ನವಕಿರಣ್ ನವತಾರೆ ಸೇವಾ ವೇದಿಕೆ ಬ್ರಹ್ಮಾವರ ಇವರ ಆಶ್ರಯದಲ್ಲಿ 32 ನೇ ವರ್ಷದ ರಾಜ್ಯಮಟ್ಟದ ಮುದ್ದು ಕೃಷ್ಣ ಸ್ಪರ್ಧೆಯು ದಿನಾಂಕ 06/09/2026 ರ ಭಾನುವಾರದಂದು ಕರ್ನಾಟಕ ಪಬ್ಲಿಕ್ ಸ್ಕೂಲ್ (ಬೋರ್ಡ್ ಶಾಲೆ ) ಯಲ್ಲಿ ಜರುಗಿತು. ಭಾರತೀಯ ಸೇನೆಯ ಕಾವಲು ಪಡೆಯ ಮೂವರು ಯೋಧರು ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ರಾಜೇಶ್ ಶೆಟ್ಟಿ ಬಿರ್ತಿ, ನ್ಯಾಯವಾದಿ ಶಾಂತರಾಮ ಶೆಟ್ಟಿ, ಸಮಾಜ ಸೇವಕ ಅಲ್ವಿನ್ ಆಂದ್ರಾದೆ, ಉದ್ಯಮಿಗಳಾದ ಅನಿಲ್ ಪಾಯಸ್, ವೇದಿಕೆಯ ಅಧ್ಯಕ್ಷರಾದ ಕುಸುಮ ಮನೋಜ್, ವೇದಿಕೆಯ ಸಂಚಾಲಕರಾದ ಉಮೇಶ್ ಪೂಜಾರಿ, ಸ್ಥಾಪಕ ಅಧ್ಯಕ್ಷರಾದ ಜ್ಯೋತಿ ಕೃಷ್ಣ ಪೂಜಾರಿ, ಗೌರವ ಅಧ್ಯಕ್ಷರಾದ ಮಮತಾ ಶೆಟ್ಟಿ, ಕಾರ್ಯದರ್ಶಿ ನೈನಾ ಜೆ ಶೆಟ್ಟಿ , ವೇದಿಕೆಯ ಮಾಜಿ ಅಧ್ಯಕ್ಷರಾದ ಅನುರಾಧ ಟೀಚರ್, SB ಟ್ರೇಡರ್ಸ್ ನ ಮಾಲಕರಾದ ಸಂಜನಾ ಸುಶಾಂತ್ ದಂಪತಿ, ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಉದಯ ಪೂಜಾರಿ, ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ಹೇಮಲತಾ ನಾಯಕ್, ಉಪಾಧ್ಯಕ್ಷರಾದ ಶಶಿಕಲಾ, ಶುಭಲಕ್ಷ್ಮಿ, ಜ್ಯೋತಿ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಲತಾ ಶೆಟ್ಟಿ, ಸಂಧ್ಯಾ ರಾಣಿ, ಕೋಶಾಧಿಕಾರಿ ಭವಾನಿ, ವೇದಿಕೆ ಸದಸ್ಯರುಗಳಾದ ಪ್ರೀತಿ ಕಲ್ಯಾಣಪುರ, ಸವಿತಾ ಜೋಗಿ, ಭಾರತಿ ದಿನೇಶ್ ರಾವ್, ಗೀತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

200 ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಸಿದರು.