ಮಂಗಳೂರು : ಆರೋಗ್ಯ ಭಾರತಿಯ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿಗಳಾದ ಡಾ ಮುರಳೀ ಕೃಷ್ಣ ಅವರು ಇವತ್ತು ಮಂಗಳೂರಿನ ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯನ್ನು ಸಂದರ್ಶಿಸಿದರು.
ಡಾ ಮುರಳೀ ಕೃಷ್ಣ ಅವರನ್ನು ಆಸ್ಪತ್ರೆಯ ವೈದ್ಯರಾದ ಡಾ ಕೇಶವ ರಾಜ್ ಹಾಗೂ ಆಸ್ಪತ್ರೆಯ ವ್ಯವಸ್ಥಾಪಕಿ ಶ್ರೀದೇವಿ ಕೇಶವರಾಜ್ ಶಾಲು ಹೊದಿಸಿ ನೆನಪಿನ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಆ ಸಂದರ್ಭದಲ್ಲಿ ಆರೋಗ್ಯ ಭಾರತಿಯ ಪ್ರಾಂತ ಉಪಾಧ್ಯಕ್ಷರೂ ಜಿಲ್ಲಾ ಗೌರವಾಧ್ಯಕ್ಷರೂ ಆದ ಡಾ ಮುರಳೀ ಮೋಹನ ಚೂಂತಾರು, ವಿಭಾಗ ಸಂಚಾಲಕರಾದ ಪುರುಷೋತ್ತಮ ದೇವಸ್ಯ ಹಾಗೂ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಚಂದ್ರಗಿರಿ ಇವರು ಉಪಸ್ಥಿತರಿದ್ದರು.

