ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಕಡೆಗಣಿಸಿದರೆ ಉಗ್ರ ಹೋರಾಟ ಖಚಿತ! -ಶರತ್ ರಾಜ್ ಆರೂರು

0
3

ತುಳು ಭಾಷೆ ನಮ್ಮ ತಾಯಿ ಭಾಷೆ, ಇದನ್ನು ಪ್ರಾದೇಶಿಕ ಭಾಷೆ ಎಂಬ ಅರಿವು ಮೂಡಿಸಬೇಕು ಹಾಗೂ ಅಧಿಕೃತ ಗೊಳಿಸಬೇಕು ಎಂದು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ ಇಲ್ಲವಾದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು
ತುಳುನಾಡ್ ರಕ್ಷಣಾ ವೇದಿಕೆ (ರಿ.) ಬ್ರಹ್ಮಾವರ ತಾಲೂಕ ಘಟಕ ಅಧ್ಯಕ್ಷ ಶರತ್ ರಾಜ್ ಆರೂರು ಎಚ್ಚರಿಸಿದ್ದಾರೆ

ಮೂಡೈ ಗಟ್ಟಸಾಲಡದ್, ಪಡ್ಡಾಯಿ ಕಡಲ ಕರತಮುಟ್ಟ, ಬಡಕಾಯಿ ಬಾರ್ಕೂರಡ್, ತೆನಕಾಯಿ ನಿಲೇಶ್ವರ ಗಡಿ ಮುಟ್ಟ, ಪಸರಿಸಿರುವ ತುಳುನಾಡು ಹಲವಾರು ದೈವ ದೇವರು ಆರಾಧನೆ ತಾಣ , ತುಳು ನಾಡಿನ ತುಳು ಭಾಷೆಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು
ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕ,

ಸ್ಥಾಪಕ ಅಧ್ಯಕ್ಷರಾಗಿರುವ ಯೋಗೀಶ್ ಶೆಟ್ಟಿ ಜಪ್ಪು, ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಫ್ರಾಂಕಿ ಡಿಸೋಜಾ ಇವರ ಮಾರ್ಗದರ್ಶನದಲ್ಲಿ ತುಳು ನಾಡು ತುಳು ಭಾಷೆಯ ರಕ್ಷಣೆಗಾಗಿ ನಾವು ಕೆಲಸ ಮಾಡಲಿದ್ದೇವೆ ಎಂದರು

ಮುಖ್ಯವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾತನಾಡಲ್ಪಡುವ ಒಂದು ಸಮೃದ್ಧ ಶ್ರೀಮಂತ ಆದಿ ದ್ರಾವಿಡ ಭಾಷೆಯಾಗಿದೆ. ಈ ಪ್ರದೇಶವನ್ನು ಒಟ್ಟಾರೆಯಾಗಿ ‘ತುಳುನಾಡು’ ಎಂದು ಕರೆಯಲಾಗುತ್ತದೆ.
ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ತುಳು ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಬಳಸುತ್ತಿದ್ದಾರೆ ದೇಶದಲ್ಲಿ ಹಲವು ಸ್ಥಳೀಯ ಭಾಷೆಗಳನ್ನು ಅಧಿಕೃತಗೊಳಿಸಿದ ಉದಾಹರಣೆಗಳು ನಮ್ಮ ಮುಂದಿವೆ ಆಗಿದ್ದರೂ ತುಳುವಿಗೆ ಸ್ಥಾನಮಾನ ಏಕೆ ಸಿಕ್ಕಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ
ಕರ್ನಾಟಕದಲ್ಲಿ ತುಳು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನವನ್ನು ನೀಡುವಂತೆ ಹಾಗೂ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರಗಳಿಗೆ ಮನವಿ ಮಾಡುತ್ತಿದ್ದೇವೆ ಕಡೆಗಣಿಸಿದರೆ ಹೋರಾಟ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.