ರೇಡಿಯೊ ಮಣಿಪಾಲ್ ನಲ್ಲಿ ಕಾರಂತ ಯಾನದ 32ನೇ ಸಂಚಿಕೆ

0
4

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್
ಸಮುದಾಯ ಬಾನುಲಿ ಕೇಂದ್ರವು ಡಾ.ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲೆ ಇದರ ಸಹಕಾರದೊಂದಿಗೆ ಅರ್ಪಿಸುತ್ತಿರುವ
ಕಾರಂತ ಯಾನ- ಡಾ.ಶಿವರಾಮ ಕಾರಂತರ ಬದುಕು ಬರಹಗಳ ದರ್ಶನ ಸರಣಿ ಕಾರ್ಯಕ್ರಮದ 32ನೇ ಸಂಚಿಕೆ ಸೆಪ್ಟೆಂಬರ್ ತಿಂಗಳ ದಿನಾಂಕ 14 ರಂದು ಸೋಮವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ಲೇಖಕರಾದ ಆತ್ರಾಡಿ ಅಮೃತಾ ಶೆಟ್ಟಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಲಿದ್ದಾರೆ. ಸೆಪ್ಟೆಂಬರ್ 15 ರಂದು ಮಂಗಳವಾರ ಮಧ್ಯಾಹ್ನ 1.30ಕ್ಕೆ ಇದರ ಮರುಪ್ರಸಾರವಾಯಿತು. ರೇಡಿಯೊದಲ್ಲಿ ಮಾತ್ರವಲ್ಲದೆ
ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ನ ಪ್ರಕಟಣೆ ತಿಳಿಸಿದೆ.