“ಶಿಕ್ಷಕನಾದವನು ಮೌಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಸೂಕ್ಷ್ಮಚಿಂತನೆಯನ್ನು ಮೂಡಿಸಬೇಕು”: ಚಕ್ರವರ್ತಿ ಸೂಲಿಬೆಲೆ

0
4


ಸ್ವಾಮಿ ವಿವೇಕಾನಂದರು 1893 ರ ಸಪ್ಟೆಂಬರ್ 11ರಂದು ಅಮೇರಿಕಾದಚಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣದ 133ನೇ ವರ್ಷಾಚರಣೆಯ ಪ್ರಯುಕ್ತ ವಿವೇಕಾನಂದ ಪದವಿ ಪೂರ್ವಕಾಲೇಜಿನ ವೈದೇಹಿ ಸಭಾಂಗಣದಲ್ಲಿ ‘ವಿವೇಕ ವಿಜಯ’ ಶೀರ್ಷಿಕೆಯಡಿಯಲ್ಲಿ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ “ವರ್ತಮಾನ ಶಿಕ್ಷಣ ಮತ್ತು ಭವಿಷ್ಯ ಭಾರತ” ಎಂಬ ವಿಷಯದಲ್ಲಿಖ್ಯಾತ ವಾಗ್ಮಿಗಳು ಹಾಗೂ ಚಿಂತಕರುಆದಚಕ್ರವರ್ತಿ ಸೂಲಿಬೆಲೆಯವರುಉಪನ್ಯಾಸ ಹಾಗೂ ಸಂವಾದಕಾರ್ಯಕ್ರಮ ನಡೆಸಿಕೊಟ್ಟರು.
ಅವರು ಮಾತನಾಡುತ್ತಾ “ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಿರುವವರು. ಸಾಮಾಜಿಕ ಜಾಲತಾಣಗಳು ಮತ್ತುಡಿಜಿಟಲ್‌ಜಗತ್ತಿನ ಪ್ರಭಾವದಿಂದತಮ್ಮನ್ನುಇತರರೊAದಿಗೆ ಹೋಲಿಸಿಕೊಂಡು, ತಮ್ಮ ಸಾಮರ್ಥ್ಯ ಮತ್ತು ಸಾಧನೆಗಳ ಬಗ್ಗೆ ಅತೃಪ್ತಿಅಥವಾ ಕೀಳರಿಮೆಯನ್ನು ಬೆಳೆಸಿಕೊಳ್ಳುವ ಸಂದರ್ಭಗಳೂ ಇವೆ. ಇಂತಹ ಸೂಕ್ಷ್ಮ ಮನಸ್ಸಿನ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕನು ಕೇವಲ ಪಾಠವನ್ನು ಬೋಧಿಸುವವನಾಗಿರಬಾರದುಅವರ ಮನಸ್ಸನ್ನು ಅರ್ಥಮಾಡಿಕೊಳ್ಳುವ ಮಾರ್ಗದರ್ಶಿಯಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂತನ್ನ ಮಗುವಿನಂತೆ ಪ್ರೀತಿಸಿ ಅವರ ಸಾಮರ್ಥ್ಯವನ್ನು ಗುರುತಿಸಿ, ಆತ್ಮವಿಶ್ವಾಸವನ್ನು ಬೆಳೆಸಿ, ಶಾಲಾ ಅವಧಿಯಲ್ಲಿತನ್ನ ವೈಯಕ್ತಿಕ ಚಿಂತೆಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿಯಿಂದ ಬೋಧಿಸುವ ಶಿಕ್ಷಕನೇ ನಿಜವಾದಅರ್ಥದಲ್ಲಿ ಶ್ರೇಷ್ಠ ಶಿಕ್ಷಕ. ಶಿಕ್ಷಣವೆಂದರೆ ಕೇವಲ ಮಾಹಿತಿಯನ್ನುತುಂಬುವುದಲ್ಲ ಮಗುವಿನೊಳಗಿರುವ ಶಕ್ತಿಯನ್ನು ಹೊರತರುವುದು.” ಎಂಬ ಸ್ವಾಮಿ ವಿವೇಕಾನಂದರ ಶಿಕ್ಷಣದ ತತ್ತ್ವದಲ್ಲಿ ಈ ಸಂದೇಶದ ಸಾರಅಡಗಿದೆಎಂದರು.
ಈ ಕಾರ್ಯಕ್ರಮದ ವಿಶೇಷಅಭ್ಯಾಗತರಾಗಿ ಆಗಮಿಸಿದ ನಿವೃತ್ತ ವಾಣಿಜ್ಯತೆರಿಗೆಅಧಿಕಾರಿಗಂಗಾಧರರೈ ಪೆರ್ನೆಇವರು ಮಾತನಾಡುತ್ತಾ ” ಬ್ರಿಟಿಷರ ದಬ್ಬಾಳಿಕೆಯ ಸಂದರ್ಭದಲ್ಲಿ ನಮ್ಮವರೇಆದ ಸನ್ಯಾಸಿಯೊಬ್ಬರು ಚಿಕಾಗೊದಲ್ಲಿ ಮಾಡಿದ ಭಾಷಣವುದೇಶದ ಹಿರಿಮೆಯನ್ನುಜಗತ್ತಿನಾದ್ಯಂತ ಪಸರಿಸಲುಕಾರಣವಾಯಿತು. ಆ ಸಂದೇಶದ ಸಾರವನ್ನು ನಾವೆಲ್ಲರುಅರಿತು ಬಾಳುವ ಕೆಲಸ ಮಾಡಬೇಕು” ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ಶ್ರೀಮತಿ ವತ್ಸಲಾರಾಜ್ನಿ,ಅಧ್ಯಕ್ಷರಾದರವೀಂದ್ರ ಪಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತಮಂಡಳಿ ನಿರ್ದೇಶಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರೇರಣಾಗೀತೆಯೊಂದಿಗೆಕಾರ್ಯಕ್ರಮಆರAಭವಾಯಿತು. ವಿವೇಕಾನಂದ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದದೇವಿಚರಣ್‌ರೈ ಎಂ ಸ್ವಾಗತಿಸಿ,ಉಪನ್ಯಾಸಕರಾದ ಮೋನಿಷಾಎನ್ ವಂದಿಸಿ, ಪವಿತ್ರಕಾರ್ಯಕ್ರಮವನ್ನು ನಿರೂಪಿಸಿದರು.