ಕರಾಡವಾಣಿಗೆ ರಜತ ಸಂಭ್ರಮ – ನೆನಪುಗಳ ಮೆಲುಕು, ಭವಿಷ್ಯದ ಹೆಜ್ಜೆಗಳಿಗೆ ಚಿಂತನೆ

0
11

-ಮಂದಾರ ರಾಜೇಶ್ ಭಟ್

ಕಾಸರಗೋಡು: ಕರಾಡ ಕಲಾ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಪೆರ್ಲ ಇದರ ಆಶ್ರಯದಲ್ಲಿ ‘ಕರಾಡವಾಣಿ’ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸದಸ್ಯರ ಸಮಾವೇಶವು ಸೆ. 6ರಂದು ಭಾರತೀ ಸದನದಲ್ಲಿ ಯಶಸ್ವಿಯಾಗಿ ನಡೆಯಿತು.

ಅರ್ಥಪೂರ್ಣ ಚಾಲನೆ

ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾಸಾಗರ ಶಿರಂತಡ್ಕ ಸ್ವಾಗತಿಸಿದರು. ರಾಜಾರಾಮ ಗುರುಕುಲ ಉದ್ದೇಶ ವಿವರಿಸಿದರು. ಉದಯವಾಣಿಯ ನಿವೃತ್ತ ಉಪಸಂಪಾದಕ ನಿತ್ಯಾನಂದ ಸಜಂಗದ್ದೆ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಭಟ್ ಪಿಲಿಂಗಲ್ಲು ಆಶಯ ನುಡಿಗಳನ್ನಾಡಿದರು. ಗಣಪತಿ ಭಟ್ ಶೆಟ್ಟಿಬೈಲು ವಂದಿಸಿದರು.

ನೆನಪುಗಳ ‘ಕರಾಡವಾಣಿ ಕಥಾ-ಕಥನ’

ಡಾ. ದುರ್ಗಾಪ್ರಸಾದ್ ಆನೆಮಜಲು ಅವರ ಸಂಯೋಜನೆಯಲ್ಲಿ ನಡೆದ ‘ಕರಾಡವಾಣಿ ಕಥಾ-ಕಥನ’ದಲ್ಲಿ ಕೃಷ್ಣ ಭಟ್ ಪಿಲಿಂಗಲ್ಲು, ಅರುಣಾ ಶಿವರಾಂ ಪಡುಪ್ಪು, ದಿವ್ಯಾ ಶಿರಂತಡ್ಕ, ಎಸ್.ಎನ್. ಭಟ್ ಸೈಪಂಗಲ್ಲು ಹಾಗೂ ನಳಿನಿ ಸೈಪಂಗಲ್ಲು ಅವರು ಪತ್ರಿಕೆಯ ಪಯಣದ ನೆನಪುಗಳನ್ನು ಹಂಚಿಕೊಂಡರು.

ಹಿರಿಯ ಪತ್ರಕರ್ತರೊಂದಿಗೆ ಸಂವಾದ

ಹಿರಿಯ ಪತ್ರಕರ್ತ ನಿತ್ಯಾನಂದ ಸಜಂಗದ್ದೆ ಅವರೊಂದಿಗೆ ರಮೇಶ್ ಮಾಣಿಮೂಲೆ ಸಂಯೋಜನೆಯಲ್ಲಿ ಸಂವಾದ ನಡೆಯಿತು. ಬಳಿಕ ಎಸ್.ಎನ್. ಭಟ್ ಸೈಪಂಗಲ್ಲು ಅವರ ನೇತೃತ್ವದಲ್ಲಿ ಸಂಪಾದಕ ಮಂಡಳಿಯೊಂದಿಗೆ ಮುಖಾಮುಖಿ ಹಾಗೂ ಮಾತುಕತೆ ಗೋಷ್ಠಿ ನಡೆಯಿತು.

‘ಕೃತಜ್ಞತಾ ಕಲಶ’ದಲ್ಲಿ ಅಭಿನಂದನೆ

ರಜತ ಸಂಭ್ರಮದಲ್ಲಿರುವ ‘ಕರಾಡವಾಣಿ’ಗೆ ‘ಕರಾಡವಾಣಿ ಕೃತಜ್ಞತಾ ಕಲಶ’ ಮೂಲಕ ಓದುಗರು ಭಾವಪೂರ್ಣ ಅಭಿನಂದನೆ ಸಲ್ಲಿಸಿದರು.

*‘ಹಳೆಯ ಸಂಚಿಕೆ–ಹೊಸ ಸಂಭ್ರಮ’ದಡಿ ಹಳೆಯ ಸಂಚಿಕೆಗಳನ್ನು ಸಂಗ್ರಹಿಸಿದವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಭವಿಷ್ಯದ ಹೆಜ್ಜೆಗಳಿಗೆ ಚಿಂತನೆ

ಚಿಂತನ–ಮಂಥನದಲ್ಲಿ ಪತ್ರಿಕೆಯ ಮುಂದಿನ ಬೆಳವಣಿಗೆ ಕುರಿತು ಸದಸ್ಯರು ಮುಕ್ತವಾಗಿ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೊಂಡರು.

ಸಮಾರೋಪ

ಜಯಶ್ರೀ ಮೈಕಾನ ಸ್ವಾಗತಿಸಿದರು. ಸದಸ್ಯರು ಅನಿಸಿಕೆ ಹಂಚಿಕೊಂಡರು. ಬಾಲಮುರಳಿ ಕೊಮ್ಮುಂಜೆ ಹಿತನುಡಿಗಳನ್ನಾಡಿದರು. ಕೋಟೆರಾಮ ಭಟ್ ಅಧ್ಯಕ್ಷೀಯ ಭಾಷಣ ಮಾಡಿದರು. ಅರುಣಾ ಶಿವರಾಂ ಪಡುಪ್ಪು ವಂದನಾರ್ಪಣೆ ನೆರವೇರಿಸಿದರು. ಸಂಜೆ ಉಪಾಹಾರದೊಂದಿಗೆ ಸಮಾವೇಶ ಸಂಪನ್ನಗೊಂಡಿತು.