ಕಾಣಿಯೂರಿನಲ್ಲಿ ಶ್ರೀ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ

0
8

ಕಾಣಿಯೂರು: ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ (ರಿ.), ಕಾಣಿಯೂರು ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಸೆ.14 ಮತ್ತು 15ರಂದು ವಿಶೇಷ ವಿಸರ್ಜನಾ ಮೆರವಣಿಗೆ ನಡೆಯಿತು.

ಕೂಡ್ರಸ್ತೆಯಿಂದ ಕಜೆಬಾಕಿಲ್ಲೆವರೆಗೆ ನಡೆದ ವಿಸರ್ಜನಾ ಮೆರವಣಿಗೆಯಲ್ಲಿ ವಿವಿಧ ಭಜನಾ ತಂಡಗಳಿಂದ ಆಕರ್ಷಕ ಕುಣಿತ ಭಜನೆ ಹಾಗೂ ವಿವಿಧ ವಿನ್ಯಾಸದ ಗೊಂಬೆಗಳು, ಮ್ಯಾಜಿಕ್ ಬ್ಯಾಂಡ್ ಸೇರಿದಂತೆ ಹಲವು ವಿನೋದಾವಳಿಗಳು ಗಮನ ಸೆಳೆದವು.

ಶ್ರೀ ಗಣೇಶೋತ್ಸವ ಫ್ರೆಂಡ್ಸ್, ಕಾಣಿಯೂರು ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಕೇಶ್ ಆಚಾರ್ಯ ಬನಾರಿ ಅವರ ಸಂಯೋಜನೆಯಲ್ಲಿ ಭಜನಾ ತಂಡಗಳು ಭಾಗವಹಿಸಿದ್ದವು. ಶ್ರೀ ಅಮ್ಮನವರು ಮಹಿಳಾ ಭಜನಾ ಮಂಡಳಿ ಕಾಣಿಯೂರು, ಶ್ರೀ ಲಕ್ಷ್ಮೀನರಸಿಂಹ ಮಹಿಳಾ ಮತ್ತು ಮಕ್ಕಳ ಭಜನಾ ಮಂಡಳಿ ಕಾಣಿಯೂರು ಹಾಗೂ ಧರ್ಮಶ್ರೀ ಮಕ್ಕಳ ಭಜನಾ ತಂಡ ಕಲ್ಪಡ ಮೂವಪ್ಪ ತಂಡಗಳು ಕುಣಿತ ಭಜನೆ ಮೂಲಕ ಮೆರವಣಿಗೆಗೆ ಮೆರುಗು ನೀಡಿದವು.

ವಿವಿಧ ವಾದ್ಯಗಳ ನಾದದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಅಂತಿಮವಾಗಿ ಕಜೆಬಾಕಿಲ್ಲೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನೆರವೇರಿಸಲಾಯಿತು.