ಸಾರ್ವಜನಿಕ ಗಣೇಶೋತ್ಸವದಿಂದ ಸಮಾಜದ ಒಗ್ಗಟ್ಟು ಬಲಪಡಲಿ: ಧರ್ಮೇಂದ್ರ ಗಣೇಶಪುರ

0
29

ಕುಳಾಯಿ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಕುಳಾಯಿ ಇದರ 55 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯು ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರದ ನಿಕಟಪೂರ್ವ ಅಧ್ಯಕ್ಷರು ಶ್ರೀ ಧರ್ಮೆಂದ್ರ ಗಣೇಶಪುರ ರವರ ಅಧ್ಯಕ್ಷತೆ ಯಲ್ಲಿ ಜರಗಿತ್ತು, ಶ್ರೀಯುತರು ತಮ್ಮ ಸಭಾಧ್ಯಕ್ಷ ಭಾಷಣದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೂಲಕ ಸಮಾಜದ ಒಗ್ಗಟ್ಟು ಬಲಯುತವಾಗಲು ಕಾರಣ ಕರ್ತರಾದ ಶ್ರೀ ಬಾಲಗಂಗಾಧರ ತಿಲಕರ ಜನ್ಮ ದಿನಾಚರಣೆಯ ಅತ್ಯಗತ್ಯವಿದೆ ಎಂದರು.

ಸಂಸದರಾದ ಕ್ಯಾಪ್ಟನ್ ಬ್ರಜೇಶ್ ಚೌಟರವರು ಸ್ವಚ್ಛ ಪರಿಸರದ ಜಾಗೃತಿಯಂಗವಾಗಿ ಸ್ವಚ್ಛ ಕುಳಾಯಿ ಬಗ್ಗೆ ಅಭಿಯಾನ ನಡೆಸಿರಿ ಎಂದರು. ಶಾಸಕರು ಡಾ ವೈ ಭರತ್ ಶೆಟ್ಟಿ ರವರು ಯುವ ಜನಾಂಗದವರಿಗೆ ಹಿರಿಯರು ಸನ್ಮಾರ್ಗದರ್ಶನ ನೀಡಿ ದೇಶ ಸೇವೆಗೆ ಬದ್ಧರಾಗಿರಬೇಕು ಎಂದರು. ಗೋವಿಂದದಾಸ ಕಾಲೇಜು ಸುರತ್ಕಲ್ ನ ಉಪನ್ಯಾಸಕರು ಮೆ|ಡಾ| ಸುಧಾ ಚಂದ್ರಶೇಖರ ಶೆಟ್ಟಿ ಯವರು ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಿಗೂ ಪ್ರಾಮುಖ್ಯತೆ ನೀಡುವ ಸಂದೇಶವನ್ನು ಶ್ರೀ ಮಹಾಗಣಪತಿಯ ವಾಹನ ಮೂಷಿಕದಿಂದ ತಿಳಿದುಕೊಂಡು ಧನಾತ್ಮಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದರು.
ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷರು ಶ್ರೀ ಮಾಧವ ಸುವರ್ಣ ರವರು ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸಂಘಟನೆಗಾಗಿ ದುಡಿದ ಹಿರಿಯರ ತ್ಯಾಗವನ್ನು ಸ್ಮರಿಸಿ ಗೌರವ ಸಲ್ಲಿಸಿ ಮುನ್ನಡೆಯೋಣ ಎಂದರು. ಉದ್ಯಮಿ ಶ್ರೀ ಪ್ರಶಾಂತ ಮುಡಾಯಿಕೋಡಿರವರು ಭ್ರಷ್ಟಾಚಾರಮುಕ್ತ ಸಮಾಜದ ಬಲವರ್ಧನೆಗೆ ಕರೆಯಿತ್ತರು ಮತ್ತು ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರು ಶ್ರೀ ಭರತ್ ರಾಜ್ ಕೃಷ್ಣಾಪುರ ರವರು ಹಿಂದು ಸಮಾಜದ ಸಂಘಟನೆಗೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಹಕಾರಿ ಎಂದರು. ವಿದ್ಯಾಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕುಮಾರಿ ಶ್ರದ್ಧಾ ಮೈರ್ಪಾಡಿ ಮತ್ತು ಕುಮಾರಿ ಹರ್ಷಿತಾ ಹರೀಶ ಭಂಡಾರಿ ಹಾಗೂ ಶ್ರೀ ಗಣಪತಿ ವಿಗ್ರಹ ರಚನೆ ಮಾಡಿದ ಶಿಲ್ಪಿ ಶ್ರೀ ವಾಸುದೇವ ಸುರತ್ಕಲ್ ರವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.

ಮ ನ ಪಾ ನಿಕಟಪೂರ್ವ ಸದಸ್ಯರು ವರುಣ್ ಚೌಟ, ಸಮಿತಿಯ ಗೌರವಾಧ್ಯಕ್ಷರು ಕೆ ಪಿ ಚಂದ್ರಶೇಖರ ಮತ್ತು ಮಹಿಳಾ ಮಂಡಲ ಕುಳಾಯಿ ಅಧ್ಯಕ್ಷೆ ರೇವತಿ ನವೀನ್ ಉಪಸ್ಥಿತರಿದ್ದರು. ರಮಾ ವೆಂಕಟ್ರಾವ್ ಮತ್ತು ಮೀನಾಕ್ಷಿ ದೇವದಾಸ ರವರು ಪ್ರಾರ್ಥನೆಗೈದು, ಸಮಿತಿಯ ಅಧ್ಯಕ್ಷರು ವಿಠ್ಠಲ್ ಸಾಲಿಯಾನ್ ರವರು ಸ್ವಾಗತಿಸಿದ್ದು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಎನ್ ಶೆಟ್ಟಿ ರವರು ಸಮಿತಿಯ ವರದಿಯನ್ನು ವಾಚಿಸಿದ್ದು, ಕೋಶಾಧಿಕಾರಿ ಶ್ರೀನಿವಾಸ ಕುಳಾಯಿ ರವರು ಸಾಧಕರ ಪರಿಚಯ ನೀಡಿ ಅಭಿನಂದಿಸಿದ್ದರು. ಜೊತೆ ಕಾರ್ಯದರ್ಶಿ ರಂಜಿತ್ ಕುಳಾಯಿ ಧನ್ಯವಾದವಿತ್ತು ಉಪಾಧ್ಯಕ್ಷರು ಯೋಗೀಶ ಸನಿಲ್ ಕುಳಾಯಿ ಕಾರ್ಯಕ್ರಮ ನಿರೂಪಣೆ ಮಾಡಿದ್ದರು.