ಸೆ.20ರಂದು ಬೆಂಗಳೂರಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಕರಾಡ ಬ್ರಾಹ್ಮಣ ಸಮಾಜ (ರಿ.) ಬೆಂಗಳೂರು ವತಿಯಿಂದ ವಾರ್ಷಿಕೋತ್ಸವ 2026 ಹಾಗೂ ಚಂಡಿಕಾ ಯಾಗ ಸೆ.20ರಂದು ನಗರದ ಶಂಕರಮಠದ ಆವರಣದಲ್ಲಿರುವ ಶ್ರೀ ಭಾರತೀತೀರ್ಥ ಸಭಾಂಗಣದಲ್ಲಿ ನಡೆಯಲಿದೆ.
ಧಾರ್ಮಿಕ ಭಕ್ತಿ ಹಾಗೂ ಸಮಾಜ ಬಾಂಧವರ ಸೌಹಾರ್ದತೆಗೆ ವೇದಿಕೆಯಾಗಲಿರುವ ಕಾರ್ಯಕ್ರಮವು ಬೆಳಗ್ಗೆ 6 ಗಂಟೆಗೆ ಚಂಡಿಕಾ ಯಾಗದ ಆರಂಭದೊಂದಿಗೆ ಚಾಲನೆ ಪಡೆಯಲಿದೆ.
ಬೆಳಗ್ಗೆ 8ರಿಂದ 9.30ರವರೆಗೆ ಉಪಾಹಾರ, 9 ಗಂಟೆಗೆ ಕರಾಡ ಕ್ಷೇತ್ರೋತ್ಸವ ಉತ್ಸವದ ಉದ್ಘಾಟನೆ ಹಾಗೂ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಬೆಳಗ್ಗೆ 11.30ಕ್ಕೆ ಚಂಡಿಕಾ ಯಾಗದ ಪೂರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ 12ರಿಂದ ಆಚಾರ್ಯರು ಹಾಗೂ ಗಣ್ಯರಿಂದ ಆಶೀರ್ವಚನ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.
ಮಧ್ಯಾಹ್ನ 1 ಗಂಟೆಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರಾಡ ರಸಪ್ರಶ್ನೆ ಹಾಗೂ ಹೌಸೀ-ಹೌಸೀ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 5.30ಕ್ಕೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
ಸಮಾಜದ ಸದಸ್ಯರು ಹಾಗೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರಾಡ ಬ್ರಾಹ್ಮಣ ಸಮಾಜದ ಕಾರ್ಯಕಾರಿ ಸಮಿತಿ ಮನವಿ ಮಾಡಿದೆ.

