ಕೊಚ್ಚಿಯಲ್ಲಿ ಮೇಳೈಸಿದ ಯಕ್ಷಗಾನ ಪ್ರದರ್ಶನ

0
5

ಕಾಸರಗೋಡು : ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಮತ್ತು ಜನ್ಮಭೂಮಿ ಪತ್ರಿಕೆ ಜಂಟಿ ವತಿಯಿಂದ ಕೊಚ್ಚಿಯ ಭಾಸ್ಕರೀಯಂ ಸಭಾಂಗಣದಲ್ಲಿ ನಡೆದ ರಾಮಕಥಾ ಸರಣಿ ಅಂಗವಾಗಿ ಯಕ್ಷಗುರು, ಕಾಸರಗೋಡಿನ ಕಲಾವಿದ ದಿವಾಣ ಶಿವಶಂಕರ ಭಟ್ ಅವರ ನೇತೃತ್ವದ ಯಕ್ಷಗಾನ ಪ್ರದರ್ಶನ ಮೇಳೈಸಿದೆ. ಮಲೆಯಾಳಂ ಭಾಷೆಯ ತವರೂರಿನಲ್ಲಿ “ರಾವಣ ವಧೆ” ಪ್ರಸಂಗ ಕನ್ನಡದಲ್ಲೇ ಯಕ್ಷಗಾನ ಪ್ರದರ್ಶನ ನಡೆದು ಶ್ಲಾಘನೆಗೆ ಪಾತ್ರವಾಗಿದೆ. ಭಾಗವತರಾಗಿ ಡಾ.ಸತೀಶ ಪುಣಿಂಚತ್ತಾಯ ಪೆರ್ಲ, ಚೆಂಡೆ-ಮದ್ದಲೆಗಳಲ್ಲಿ ರಾಜೇಂದ್ರ ಪ್ರಸಾದ ಪುಂಡಿಕಾ, ಶ್ರೀಸ್ಕಂದ ದಿವಾಣ ಸಹಕರಿಸಿದರು. ಪಾರ್ಥಧಾರಿಗಳಾಗಿ ದಿವಾಣ ಶಿವಶಂಕರ ಭಟ್, ಶೇಣಿ ವೇಣುಗೋಪಾಲ ಭಟ್, ಪ್ರಶಾಂತ ನೆಲ್ಯಾಡಿ, ರಾಮಚಂದ್ರ ಹೊಳ್ಳ ಕುಳ, ಮನೀಶ್ ಪಾಟಾಳಿ ಎಡನೀರು, ಓಂ ಪ್ರಕಾಶ ಬದಿಯಡ್ಕ, ಶೇಖರ ಜಯನಗರ ಇದ್ದರು. ಜಗದೀಶ ಬದಿಯಡ್ಕ, ರಘುರಾಮ ಮಣಿಯಾಣಿ ಆದೂರು, ಚಂದ್ರ ಮೋಹನ ಕೂಡ್ಲು ಸಹಕರಿಸಿದರು.