-ಮಂದಾರ ರಾಜೇಶ್ ಭಟ್
ಸಮಾಜದ ಒಗ್ಗಟ್ಟು ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ (ರಿ.) 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 27, 2026ರ ರವಿವಾರದಂದು ಪೂರ್ವಾಹ್ನ 10:00 ಗಂಟೆಗೆ ಶ್ರೀನಿವಾಸಪುರ ಗುಂಡ್ಯಡ್ಕ ಸಭಾಭವನದಲ್ಲಿ ಜರುಗಲಿದೆ.
ಸಂಘದ ಅಧ್ಯಕ್ಷರಾದ ಕೆ. ರಾಮಚಂದ್ರ ಭಟ್ ನಾಟೇಕರ್, ಕಾರ್ಯದರ್ಶಿ ಚಂದ್ರಶೇಖರ ಭಟ್ ಕಟೀಲು ಹಾಗೂ ಕೋಶಾಧ್ಯಕ್ಷ ಪ್ರಭಾಕರ ಭಾಟೆ ಅವರ ಆಹ್ವಾನದ ಮೇರೆಗೆ ನಡೆಯಲಿರುವ ಈ ಮಹಾಸಭೆಯಲ್ಲಿ ಸಮಾಜದ ಎಲ್ಲಾ ಬಾಂಧವರು ಸಕಾಲದಲ್ಲಿ ಪಾಲ್ಗೊಂಡು, ತಮ್ಮ ಅಮೂಲ್ಯ ಸಲಹೆ-ಸೂಚನೆಗಳೊಂದಿಗೆ ಸಂಘದ ಪ್ರಗತಿಗೆ ಸಹಕರಿಸುವಂತೆ ವಿನಂತಿಸಲಾಗಿದೆ.
ಈ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರನ್ನು ಗೌರವಿಸಿ ಪುರಸ್ಕರಿಸಲಾಗುತ್ತದೆ.
ವಂಶಾವಳಿ ಸಂಗ್ರಹಕ್ಕಾಗಿ ಮಾಧವ ಭಟ್ ಅಂಬೇಕರ್, ಸಂಗೀತ ಕ್ಷೇತ್ರದಲ್ಲಿ ಪ್ರಮೋದ್ ಸಪ್ರೆ, ಶಾಸ್ತ್ರೀಯ ಸೂಜಿ ಚಿಕಿತ್ಸೆಯಲ್ಲಿ ವೇದಾವತಿ ಪರಾಡ್ಕರ್, ಲೆಕ್ಕ ಪರಿಶೋಧಕರಾಗಿ ಮಾ. ರೋಹಿತ್ ಪರಾಡ್ಕರ್ ಹಾಗೂ ಕು. ನೇಹ ಗುರ್ಜರ್ ಅವರನ್ನು ಪುರಸ್ಕರಿಸಲಾಗುವುದು ಹಾಗೂ ಸಮಾಜದ ದಾರಿದೀಪವಾಗಿರುವ ಹಿರಿಯ ಗಣ್ಯರಾದ ಶ್ರೀಮತಿ ಹಾಗೂ ಮಹಾದೇವ ಭಟ್ (ಕೇಮಾರು), ಆಶಾ ಆರ್. ಭಟ್ (ಮುಂಡ್ಕಿನಜಡ್ಡು) ಮತ್ತು ರಾಧಾ ಎಸ್. ಭಟ್ (ಕುಕ್ಕುಡೇಲು) ಅವರನ್ನು ಸಭೆಯಲ್ಲಿ ಗೌರವಪೂರ್ವಕವಾಗಿ ಗೌರವಾರ್ಪಣೆ ಮಾಡಲಾಗುತ್ತದೆ ಆಮಂತ್ರಣ ಪತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಸಂಘಟನೆಯೇ ಬಲ, ಪರಸ್ಪರ ಸಹಕಾರವೇ ಪ್ರಗತಿಯ ಮೂಲ” ಎಂಬ ಆಶಯದೊಂದಿಗೆ ನಡೆಯುವ ಈ ಮಹಾಸಭೆಯು ಸಮಾಜದ ಬಾಂಧವರಲ್ಲಿ ಹೊಸ ಉತ್ಸಾಹವನ್ನು ತುಂಬಲಿದೆ. ಹಿರಿಯರ ಅನುಭವದ ಮಾತುಗಳು, ಸಾಧಕರ ಸ್ಫೂರ್ತಿದಾಯಕ ಯಶಸ್ಸು ಮತ್ತು ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆ ಸಮಾಜವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅತ್ಯಂತ ಮುಖ್ಯವಾಗಿದೆ. ಬನ್ನಿ, ಈ ಮಹಾಸಭೆಯಲ್ಲಿ ಒಟ್ಟಾಗಿ ಪಾಲ್ಗೊಂಡು ಯಶಸ್ಸಿಗೆ ಹಾಗೂ ಭವಿಷ್ಯದ ರೂಪುರೇಷೆಗಳಿಗೆ ಕೈಜೋಡಿಸಿ ಎಂದು ಸಂಕಟಕರು ವಿನಂತಿಸಿದ್ದಾರೆ.

