ಗುಂಡ್ಯಡ್ಕದಲ್ಲಿ ಕರಾಡ ಬ್ರಾಹ್ಮಣ ಸಮಾಜದ 58ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರದ ಸಂಭ್ರಮ

0
20
-ಮಂದಾರ ರಾಜೇಶ್ ಭಟ್

ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ, ಶ್ರೀನಿವಾಸಪುರ (ಗುಂಡ್ಯಡ್ಕ) ಇಲ್ಲಿನ ಸಭಾಂಗಣದಲ್ಲಿ ದಿನಾಂಕ 27 ಸೆಪ್ಟೆಂಬರ್ 2026ರ ರವಿವಾರ ಬೆಳಿಗ್ಗೆ 10 ಗಂಟೆಗೆ 58ನೇ ವರ್ಷದ ವಾರ್ಷಿಕ ಮಹಾಸಭೆಯು ಜರುಗಲಿದೆ. ಈ ಮಹಾಸಭೆಗೆ ಸಂಘದ ಎಲ್ಲಾ ಸದಸ್ಯರು ಹಾಗೂ ಸಮಾಜ ಬಾಂಧವರು ಸಕಾಲದಲ್ಲಿ ಆಗಮಿಸಿ, ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಸಂಘದ ಸರ್ವೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕಾಗಿ ಆಯೋಜಕರು ಸವಿನಯವಾಗಿ ವಿನಂತಿಸಿದ್ದಾರೆ.

​ಈ ಮಹಾಸಭೆಯ ಸಂದರ್ಭದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ತರಗತಿಗಳಲ್ಲಿ ಶೇಕಡಾ 90ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಸಾಧನೆಗೈದ ಕರಾಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಗುತ್ತದೆ.

ಇದರನ್ವಯ, ಎಸ್.ಎಸ್.ಎಲ್.ಸಿ. ತರಗತಿಯಲ್ಲಿ ಶ್ರವಣ ಪಂಡಿತ್ (ಶೇಕಡಾ 93), ಕು. ಸುಧನ್ಯ ದೇವ್ ಜಿ (ಶೇಕಡಾ 91) ಮತ್ತು ಅನಿರುದ್ಧ ಭಟ್ (ಶೇಕಡಾ 91) ಅವರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಹಾಗೆಯೇ ಪಿ.ಯು.ಸಿ. ತರಗತಿಯಲ್ಲಿ ಮೇಧಾ ಜಿ. ಭಟ್ (ಶೇಕಡಾ 99), ಶ್ರಾವ್ಯಾ ಪಿ. ಪರಾಡ್ಕರ್ (ಶೇಕಡಾ 99) ಹಾಗೂ ನಿಶಾಂತ್ ಭಟ್ (ಶೇಕಡಾ 93) ಅವರು ಅತ್ಯುತ್ತಮ ಅಂಕಗಳನ್ನು ಗಳಿಸಿ ಹೆಮ್ಮೆಗೆ ಪಾತ್ರರಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಲಭಿಸುವ ಇಂತಹ ಸನ್ಮಾನ ಮತ್ತು ಪುರಸ್ಕಾರಗಳು ಕೇವಲ ಪ್ರಶಂಸೆಯಷ್ಟೇ ಅಲ್ಲದೆ, ಅವರ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲದ ಗುರುತಾಗಿ ಅಪಾರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತವೆ. ಸಮಾಜದ ಹಿರಿಯರಿಂದ ದೊರೆಯುವ ಈ ಪ್ರೋತ್ಸಾಹವು ಅವರಲ್ಲಿ ಮುನ್ನಡೆಯುವ ಹುರುಪನ್ನು ಹೆಚ್ಚಿಸುವುದಲ್ಲದೆ, ಉನ್ನತ ಗುರಿಗಳನ್ನು ಮುಟ್ಟಲು ಬೇಕಾದ ಮಾನಸಿಕ ಸ್ಥೈರ್ಯವನ್ನು ಒದಗಿಸುತ್ತದೆ. ಈ ಪ್ರತಿಭಾ ಪುರಸ್ಕಾರವು ಇಂದಿನ ವಿಜೇತರಿಗೆ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ಇತರ ವಿದ್ಯಾರ್ಥಿಗಳಿಗೂ ಕೂಡ ಕಠಿಣ ಪರಿಶ್ರಮದಿಂದ ಸಾಧನೆ ಮಾಡಲು ದೊಡ್ಡ ಸ್ಪೂರ್ತಿಯಾಗಲಿದೆ.