ಶ್ರೀರಂಗಪಟ್ಟಣದ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಜಯಂತಿ – ಆಯುರ್ವೇದ ದಿನ ಆಚರಣೆ ಸ್ತ್ರೀ ರಂಗನಾಯಕಿ ಸಮಾಜದಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ “

0
39

ಶ್ರೀರಂಗಪಟ್ಟಣ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಸ್ತ್ರೀ ರಂಗನಾಯಕಿ ಸಮಾಜ ವತಿಯಿಂದ ಧನ್ವಂತರಿ ಜಯಂತಿ ಅಂಗವಾಗಿ ರಾಷ್ಟ್ರೀಯ ಆಯುರ್ವೇದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಧನ್ವಂತರಿ ಭಗವಾನರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಆಯುರ್ವೇದದ ಮಹತ್ವವನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷೆ ಬಿ ಎಸ್ ವಿಶಾಲಾಕ್ಷಿ ಪದ್ಮನಾಭ “ಆಯುರ್ವೇದವು ನಮ್ಮ ಭಾರತದ ಪ್ರಾಚೀನ ಕೊಡುಗೆ. ಇಂದಿನ ಒತ್ತಡದ ಜೀವನದಲ್ಲಿ ಆಯುರ್ವೇದ ಜೀವನಶೈಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಆರೋಗ್ಯವೇ ಭಾಗ್ಯ, ವಿಶೇಷವಾಗಿ ಮಹಿಳೆಯರ ಆರೋಗ್ಯವೇ ಕುಟುಂಬದ ಆರೋಗ್ಯ” ಎಂದು ತಿಳಿಸಿದರು.

ಕಾಮಧೇನು ಸ್ವಸಹಾಯ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ ಶ್ರೀರಂಗಪಟ್ಟಣದ ಕಾವೇರಿ ತೀರದ ಸಂಜೀವಿನಿ ಸುತ್ತಮುತ್ತಲಿನ ಅಮೃತಬಳ್ಳಿ, ಅಶ್ವಗಂಧ, ತುಳಸಿ ಸಸ್ಯಗಳು ಇಂದಿಗೂ ಪ್ರಸಿದ್ಧ. ಹಳೆಯ ತಲೆಮಾರಿನ ವೈದ್ಯರ ಪ್ರಕಾರ, ಇಲ್ಲಿನ ಮಣ್ಣಿನಲ್ಲಿ ಬೆಳೆದ ಗಿಡಮೂಲಿಕೆಗಳಿಗೆ ವಿಶೇಷ ಶಕ್ತಿ ಇದೆ.
ಬ್ರಿಟಿಷರ ಆಳ್ವಿಕೆಯಲ್ಲಿ ಈ ಪರಂಪರೆ ಮರೆಯಾಯಿತು. ಈಗ ಸರ್ಕಾರಿ ಆಯುರ್ವೇದ ಆಸ್ಪತ್ರೆ ಅದೇ ಪರಂಪರೆಯನ್ನು ಮುಂದುವರಿಸುತ್ತಿದೆ. ಧನ್ವಂತರಿ ಜಯಂತಿಯಂದು ಸ್ತ್ರೀ ರಂಗನಾಯಕಿ ಸಮಾಜ ಈ ಇತಿಹಾಸವನ್ನು ನೆನಪಿಸಿರುವುದು ಶ್ಲಾಘನೀಯ ಎಂದರು

ಆಸ್ಪತ್ರೆಯ ತಾಲೂಕು ಆಡಳಿತ ವೈದ್ಯಾಧಿಕಾರಿಗಳಾದ ಡಾ. ಎಂ ಲೋಕೇಶ್ ಮಾತನಾಡಿ ಆಯುರ್ವೇದದಲ್ಲಿ ದಿನಚರಿ, ಋತುಚರ್ಯ, ಆಹಾರ ಪದ್ಧತಿ ಮತ್ತು ಔಷಧೀಯ ಸಸ್ಯಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಯುನಾನಿ ವೈದ್ಯಾಧಿಕಾರಿಗಳು ಡಾ. ಈಫತ್ ರೆಹಾನ, ತಜ್ಞ ವೈದ್ಯರಾದ ಡಾ. ರಜನಿ ಹೆಗ್ಡೆ, ಡಾ.ಎಸ್ ಎಲ್ ಅಭಿಷೇಕ್ ಪಾರ್ಮೋಸಿಸ್ಟ್ ಎಸ್ ಲತಾ,ಸಿ.ಅಕ್ಷತಾ, ವಿವೇಕಾನಂದ ಯೋಗ ಕಿಶೋರ ಕೇಂದ್ರದ ಅಧ್ಯಕ್ಷ ಕೆ ಶಟ್ಟಹಳ್ಳಿ ಅಪ್ಪಾಜಿ, ಮಾಜಿ ಪುರಸಭಾ ಅಧ್ಯಕ್ಷರಾದ ಗಂಜಾಂ ಕೃಷ್ಣಪ್ಪ , ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಹದೇವು, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್ , ಎಸ್ ಕೆ ಡಿ ಆರ್ ಡಿ ಎಸ್ ವಲಯ ಮೇಲ್ಚಾಲಕರಾದ ಇಲಿಯಾಸ್ ಖಾನ್ ಅಸ್ಪತ್ರೆ ಸಿಬ್ಬಂದಿಗಳಾದ ಕಿರಣಕುಮಾರ್, ಅಶ್ವಿನಿ , ಮನೋಜ್,
ವೆಂಕಟರಾಜು, ಸುನಿಲ್,ಸಾವಿತ್ರಿ ಬಾಯಿ ಮುಂತಾದವರು ಭಾಗವಹಿಸಿದ್ದರು.