1,000 ಚದರ ಮೀಟರ್‌ವರೆಗಿನ “ಒಂದೇ ನಿವೇಶನ” (Single Plot) ನಕ್ಷೆ ಮಂಜೂರಾತಿ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ!

0
17

ಬಿಜೆಪಿಯ ಸುದೀರ್ಘ ಜನಪರ ಹೋರಾಟಕ್ಕೆ ಬೃಹತ್ ಜಯ : ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ

ಬೆಳ್ತಂಗಡಿ : ಸಾಮಾನ್ಯ ನಾಗರಿಕರು ಮತ್ತು ಸಣ್ಣ ಆಸ್ತಿ ಮಾಲೀಕರು ನಕ್ಷೆ ಮಂಜೂರಾತಿ ಹಾಗೂ ಲೇಔಟ್ ಪ್ಲಾನ್ ಅನುಮತಿಗಾಗಿ ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವ ತೊಂದರೆಯನ್ನು ತಪ್ಪಿಸಲು ಭಾರತೀಯ ಜನತಾ ಪಾರ್ಟಿ (BJP) ನಡೆಸಿದ ನಿರಂತರ ಸತ್ಯಾಗ್ರಹ, ಬೀದಿಗಿಳಿದ ಹೋರಾಟ ಮತ್ತು ಸಾರ್ವಜನಿಕ ಒತ್ತಡಕ್ಕೆ ಕೊನೆಗೂ ಸರ್ಕಾರ ಮಣಿದಿದೆ.

ಕರ್ನಾಟಕ ಸರ್ಕಾರವು ದಿನಾಂಕ 24.09.2026 ರಂದು ಹೊರಡಿಸಿರುವ ನೂತನ ಅಧಿಸೂಚನೆಯ ಪ್ರಕಾರ, 1,000 ಚದರ ಮೀಟರ್‌ವರೆಗಿನ “ಸಿಂಗಲ್ ಪ್ಲಾಟ್” (Single Plot) ನಕ್ಷೆ ಮಂಜೂರಾತಿ ನೀಡುವ ಅಧಿಕಾರವನ್ನು ಮಹಾನಗರ ಪಾಲಿಕೆಗಳ ವಲಯ ಆಯುಕ್ತರು, ನಗರಸಭೆ ಆಯುಕ್ತರು, ಪುರಸಭೆ/ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಪಿಡಿಒ (PDO) ಮಟ್ಟದ ಅಧಿಕಾರಿಗಳಿಗೆ ವಿಕೇಂದ್ರೀಕರಿಸಿ ಆದೇಶ ಹೊರಡಿಸಿದೆ.

ಬಿಜೆಪಿಯ ಹೋರಾಟದ ಫಲ:

ಸಾಮಾನ್ಯ ಜನರು ತಮ್ಮದೇ ಸ್ವಂತ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಅಥವಾ ಸಣ್ಣ ಲೇಔಟ್ ನಕ್ಷೆ ಮಂಜೂರಾತಿ ಪಡೆಯಲು ನಗರಾಭಿವೃದ್ಧಿ ಪ್ರಾಧಿಕಾರಗಳ ಸುತ್ತ ತಿರುಗಿ ಲಂಚಾವತಾರ ಮತ್ತು ಕೆಂಪು ಪಟ್ಟಿಯ ಕಿರುಕುಳಕ್ಕೆ ಒಳಗಾಗುತ್ತಿದ್ದರು. ಈ ವ್ಯವಸ್ಥೆಯ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಬೃಹತ್ ಚಳವಳಿ ರೂಪಿಸಿ, ಆಡಳಿತವನ್ನು ಜನರ ಬಾಗಿಲಿಗೆ ತಲುಪಿಸಬೇಕು ಎಂದು ನಿರಂತರವಾಗಿ ಆಗ್ರಹಿಸಿತ್ತು.

ಈ ನಿರ್ಧಾರವು ಸಂಪೂರ್ಣವಾಗಿ ಭಾರತೀಯ ಜನತಾ ಪಾರ್ಟಿಯ ಸಾರ್ವಜನಿಕ ಕಾಳಜಿ ಮತ್ತು ಸಂಘಟಿತ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ. ಇದರಿಂದಾಗಿ ಲಕ್ಷಾಂತರ ಸಾಮಾನ್ಯ ನಾಗರಿಕರಿಗೆ, ರೈತರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ತಕ್ಷಣದ ಪರಿಹಾರ ಸಿಕ್ಕಂತಾಗಿದೆ.

ಬಿಜೆಪಿ ಎಂದಿಗೂ ಜನರ ಪರವಾಗಿ ನಿಲ್ಲುತ್ತದೆ ಎಂಬುದಕ್ಕೆ ಈ ಆದೇಶವೇ ಸಾಕ್ಷಿ. ಜನಸಾಮಾನ್ಯರ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ.