ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ವಂದೇ ಮಾತರಂ ಸಾಮೂಹಿಕ ಗಾಯನ -ನಮಾಮಿ ಭಾರತಂ‌

0
8

ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ವಿದ್ಯಾಭಾರತಿ, ಕರ್ನಾಟಕ ಇದರ ವತಿಯಿಂದ ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವೈದೇಹಿ ಸಭಾಂಗಣದಲ್ಲಿ ‘ನಮಾಮಿ ಭಾರತಂʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಒಂದು ಧ್ವನಿ, ಒಂದುಸಂಕಲ್ಪ, ಒಂದುಭಾರತ ಎಂಬ ಸ್ಫೂರ್ತಿಯೊಂದಿಗೆ ವಂದೇಮಾತರಂ ಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು.

ಕಿರಿಯ ಪೀಳಿಗೆಗೆ ವಂದೇ ಮಾತರಂನ ಐತಿಹಾಸಿಕ ಪಯಣ, ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಅದರ ಮಹತ್ವ ತಿಳಿಸಿಕೊಡುವ ಸಂಕಲ್ಪವೂ ಅದರೊಂದಿಗೆ ಬೆರೆತಿತ್ತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಮ್. ಉಪನ್ಯಾಸಕ ಉಪನ್ಯಾಸಕೇತರ ಬಂಧುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.