
ಕಾರ್ಲ ಡೇವಿಡ್ ಮತ್ತು ಕೋಸೆಸ್ ಪಿಂಟೋ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ಡ್ ಮಂಗಳೂರು ಇವರು ಕೊಡ ಮಾಡಿದ ಸಹಾಯಕ ವಿದ್ಯಾರ್ಥಿ ವೇತನಕ್ಕೆ ಬೆಳಾಲು ಶ್ರೀ ಧ. ಮಂ. ಪ್ರೌಢಶಾಲೆಯ ಶಾಲೆಯ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ರಕ್ಷಾ ಹಾಗೂ ಹೇಮಲತಾ ಆಯ್ಕೆ ಆಗಿರುತ್ತಾರೆ.
ಇವರಿಗೆ ಸಂಸ್ಥೆಯ ವತಿಯಿಂದ ನೀಡಿದ ₹3000 ದ ಚೆಕ್ ಹಾಗೂ ಸರ್ಟಿಫಿಕೇಟನ್ನು ವಿದ್ಯಾರ್ಥಿಗಳ ಪೋಷಕರಿಗೆ ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಹಸ್ತಾಂತರಿಸಿ ಶುಭ ಹಾರೈಸಿದರು. ಆರ್ಥಿಕ ಸಹಕಾರ ವಿದ್ಯಾರ್ಥಿವೇತನವನ್ನು ನೀಡಿದ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
