ಮುಂಬಯಿ ಯಕ್ಷಗಾನ ಸಮ್ಮೇಳನದ ಕರೆಯೋಲೆ ಬಿಡುಗಡೆ

0
5

ಸಮ್ಮೇಳನ ಸಾಂಗವಾಗಲಿ: ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ

ಮಂಗಳೂರು : ‘ಕರಾವಳಿಯ ಜನಪ್ರಿಯ ಕಲೆಯಾದ ಯಕ್ಷಗಾನವನ್ನು ಮುಂಬೈಯಲ್ಲಿ ಬಹುವಿಧವಾಗಿ ಮೆರೆಸಿದ ಅಜೆಕಾರು ಕಲಾಭಿಮಾನಿ ಬಳಗವು ತನ್ನ ರಜತ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ.

ಈ ಸಂಬಂಧವಾಗಿ ನಡೆಯುವ ಮುಂಬಯಿ ಯಕ್ಷಗಾನ ಸಮ್ಮೇಳನವು ಸಾಂಗವಾಗಿ ನೆರವೇರಲಿ ‘ ಎಂದು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶುಭ ಹಾರೈಸಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗದ ರಜತ ಪರ್ವದ ಅಂಗವಾಗಿ ಅಕ್ಟೋಬರ 3, 4 ರಂದು ಮುಂಬೈಯಲ್ಲಿ ನಡೆಯುವ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಜೆಕಾರು ಕಲಾಭಿಮಾನಿ ಬಳಗದ ಪರವಾಗಿ ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಸ್ವಾಮೀಜಿಯವರಿಗೆ ಫಲಕಾಣಿಕೆಯಿತ್ತು ಸ್ವಾಗತಿಸಿದರು. ಪ್ರಧಾನ ಸಲಹೆಗಾರರಾದ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ಮಂತ್ರಾಕ್ಷತೆಯೊಂದಿಗೆ ಆಮಂತ್ರಣ ಪತ್ರಿಕೆಯನ್ನು ಸಮ್ಮೇಳನ ಸಮಿತಿಗೆ ಹಸ್ತಾಂತರಿಸಿದರು.