ನಿತ್ಯ ಧ್ಯಾನ ಯೋಗ ವ್ಯಾಯಾಮಗಳ ಮೂಲಕ ಒತ್ತಡದಿಂದ ದೂರ ಇರಬಹುದು

0
8

ಉಡುಪಿ : ಕೆಲವು ವರ್ಷಗಳ ಹಿಂದಿನ ತನಕ ನಮ್ಮ ಹಿರಿಯರು ಭೂತ ಕೋಲ ಅಂತ ತಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮಾಡುತ್ತಾ ನೆಮ್ಮದಿಯಿಂದ ಇದ್ದರು.ಇವತ್ತು ಪ್ಲೇ ಸ್ಕೂಲ್ ಮಕ್ಕಳಿಗೂ ಒತ್ತಡ ಹೆಚ್ಚುತ್ತಿದೆ.ಮಕ್ಕಳ ಮೇಲೆ ಅಧಿಕ ಅಂಕ , ಪರೀಕ್ಷೆ ಮತ್ತಿತರ ಒತ್ತಡ ಗಳು ಹೆಚ್ಚುತ್ತಿವೆ.ದೊಡ್ಡವರೂ ಹಲವು ಬಗೆಯ ಒತ್ತಡಗಳಲ್ಲಿರುತ್ತಾರೆ.ಅಂತೂ ಬಾಲ್ಯದಿಂದ ವೃದ್ದಾಪ್ಯದತನಕ ಒತ್ತಡ ಜೀವನ‌ ತಪ್ಪಿದ್ದಲ್ಲ. ಇದನ್ನು ಕಡಿಮೆ ಮಾಡಲು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ,ನಿತ್ಯ ಧ್ಯಾನ ಯೋಗ ವ್ಯಾಯಾಮಗಳ ಮೂಲಕ ದೇಹ ಮನಸ್ಸನ್ನು ಒತ್ತಡದಿಂದ ದೂರ ಇರಿಸಲು ನಾವೆಲ್ಲ ಪ್ರಯತ್ನ‌ ಮಾಡಬೇಕು ಎಂದು ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ ಹೇಳಿದರು.

ಅವರು, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಮುಂಬೈ, ಲಯನ್ಸ್ ಕ್ಲಬ್ ಮಣಿಪಾಲ, ಲಯನ್ಸ್ ಕ್ಲಬ್ ಆಫ್ ಉಡುಪಿ ಲಕ್ಷ್ಯ, ಲಯನ್ಸ್ ಡಿಸ್ಟ್ರಿಕ್ಟ್ 317 C ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ-ಕರಾವಳಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಕಮಲ್ ಎ. ಬಾಳಿಗ ಸಭಾಂಗಣದಲ್ಲಿ ನಡೆದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಡಾ. ವಿರೂಪಾಕ್ಷ ದೇವರಮನೆ ಮನೋವೈದ್ಯರು,ಡಾ. ಎ. ವಿ. ಬಾಳಿಗ ಸ್ಮಾರಕ ಅಸ್ಪತ್ರೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ PMJF ಲಯನ್ ರಮಾನಂದ ಕೆ., ದ್ವಿತೀಯ ವೈಸ್ ಡಿಸ್ಟ್ರಿಕ್ಟ್ ಗವರ್ನರ್, MJF ಲಯನ್ ರವಿರಾಜ ನಾಯಕ್, ಮುಖ್ಯ ಸಂಯೋಜಕರು, ಲಯನ್ಸ್ – ಗ್ಲೋಬಲ್ ಕಾಸಸ್ ಮಾನಸಿಕ ಆರೋಗ್ಯ MJF ಲಯನ್ ಕೃಷ್ಣ ಮುಖೋಪಾಧ್ಯಾಯ, ಅಧ್ಯಕ್ಷರು, ಲಯನ್ಸ್ ಕ್ಲಬ್ ಮಣಿಪಾಲ, ಲಯನ್ ಹೆರಾಲ್ಡ್ ಸೋನ್ಸ್, ಅಧ್ಯಕ್ಷರು, ಲಯನ್ಸ್ ಕ್ಲಬ್ ಆಫ್ ಉಡುಪಿ ಲಕ್ಷ್ಯ, PMJF ಲಯನ್ ಡಾ. ಎಚ್. ಗಣೇಶ್ ಪೈ, ಕಾರ್ಯಕ್ರಮ ಸಂಯೋಜಕರು ಹಾಗೂ ಡಾ. ಕೃಷ್ಣಮೂರ್ತಿ ಉಪಾಧ್ಯಾಯ, ಅಧ್ಯಕ್ಷರು, IMA ಉಡುಪಿ-ಕರಾವಳಿ , ಡಾ ನಿಶಾಂತ್ ಪಿ ಭಟ್ ಲಯನ್ ಜೋನ್ ಚೇರ್ಮನ್ ಹಾಗೂ ಆಸ್ಪತ್ರೆಯ ಮನೋವೈದ್ಯರಾದ ಡಾ. ಮಾನಸ್ ಈ. ಆರ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಜೀವನಾನುಭವಗಳಿಗೆ ಕಿವಿಗೊಡುವುದು, ಅವರ ಅನುಭವಗಳನ್ನು ಗೌರವಿಸುವುದು ಹಾಗೂ ಮಾನಸಿಕ ಆರೋಗ್ಯದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದ ಮೊದಲಿಗೆ ಬಂಧು ಹಗಲು ಆರೈಕೆ ಕೇಂದ್ರ ಹಾಗೂ ಅಭಯ ಪುನರ್ವಸತಿ ಕೇಂದ್ರ ಮತ್ತು ಹೊಂಬೆಳಕು ಸಂಸ್ಥೆಯ ನಿವಾಸಿಗರು ರಚಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು PMJF ಲಯನ್ ಹರಿಪ್ರಸಾದ್ ರೈ, ಪ್ರಥಮ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಉದ್ಘಾಟಿಸಿದರು.

ಬಂಧು ಹಗಲು ಆರೈಕೆ ಕೇಂದ್ರ ಹಾಗೂ ಅಭಯ ಪುನರ್ವಸತಿ ಕೇಂದ್ರ ಹೊಂಬೆಳಕು ಮತ್ತು ಪರಿವರ್ತನ ಸಂಸ್ಥೆಗಳ ನಿವಾಸಿಗಳು ಒಳಂಗಿಣ ಮತ್ತು ಹೊರಂಗಿಣ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು,ವಿಜೇತರಿಗೆ ಬಹುಮಾನವನ್ನು ವೇದಿಕೆಯಲ್ಲಿ ವಿತರಿಸಲಾಯಿತು. ಹಾಗೂ ಆಗಮಿಸಿದ ಎಲ್ಲಾ ನಿವಾಸಿಗರಿಗೆ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.

ಸಮಾಜದ ಮುಖ್ಯ ವಾಹಿನಿಗಳಲ್ಲಿ ಗುರುತಿಸಿಕೊಳ್ಳುತ್ತಿರುವ ನಮ್ಮ ಫಲಾನುಭವಿಗಳು ಹಾಗೂ ಅವರ ಮನೆಯವರನ್ನು ಗುರುತಿಸಿ ಅವರಿಗೂ ಗೌರವಿಸಲಾಯಿತು.

ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಬಂಧು ಹಗಲು ಆರೈಕೆ ಕೇಂದ್ರದ ನಿವಾಸಿ ಕುಮಾರಿ ಶಶಿರೇಖಾ ಪ್ರಾರ್ಥನೆ ಸಲ್ಲಿಸಿದರು. ಆಪ್ತ ಸಮಾಲೋಚಕಿ ಜಮೀಲಾ ರಹೀಮ್ ವಂದನಾರ್ಪಣೆ ಸಲ್ಲಿಸಿದರು. ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಬಂಧು ಹಗಲು ಆರೈಕೆ ಕೇಂದ್ರ ಹಾಗೂ ಅಭಯ ಪುನರ್ವಸತಿ ಕೇಂದ್ರ ಹೊಂಬೆಳಕು ಮತ್ತು ಪರಿವರ್ತನ ಸಂಸ್ಥೆಗಳ ನಿವಾಸಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು.