ಸುವರ್ಣ ಸಂಭ್ರಮದಲ್ಲಿ ತುಳು ಭಾಷಾಭಿಮಾನದ ಸಂದೇಶ ಸಾರಿದ ವಿಜಯ ಕುಮಾರ್ ಜೈನ್

0
78

ಅಳದಂಗಡಿ : ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಕೆಸರು ಗದ್ದೆ ಕ್ರೀಡಾಕೂಟವು ಅಕ್ಟೋಬರ್ 11ರಂದು ಅಳದಂಗಡಿಯ ನಡಾಯಿ ಗದ್ದೆಯಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

ಕ್ರೀಡಾಕೂಟದಲ್ಲಿ ಅನೇಕರು ವಿವಿಧ ರೀತಿಯ ಶಾಲುಗಳನ್ನು ಧರಿಸಿ ಭಾಗವಹಿಸಿದ್ದರು. ಆದರೆ, ತುಳು ಭಾಷೆ ಮತ್ತು ತುಳುನಾಡಿನ ಸಂಸ್ಕೃತಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ಅವರು ಇಡೀ ದಿನ ತುಳು ಶಾಲು ಧರಿಸಿ ಗಮನ ಸೆಳೆದರು.

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ತುಳು ಭಾಷೆ, ಸಂಸ್ಕೃತಿ ಹಾಗೂ ಮಣ್ಣಿನ ಗೌರವವನ್ನು ಎತ್ತಿಹಿಡಿಯುವ ಅವರ ಈ ನಡೆ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಕ್ರೀಡಾಕೂಟದ ಸಂಭ್ರಮದ ನಡುವೆ ತುಳುನಾಡಿನ ಅಸ್ಮಿತೆಯನ್ನು ಪ್ರತಿಬಿಂಬಿಸುವ ಮೂಲಕ ವಿಜಯ ಕುಮಾರ್ ಜೈನ್ ಅವರು ಎಲ್ಲರ ಗಮನ ಸೆಳೆದರು.

ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಕೇವಲ ಮಾತಿನಲ್ಲಿ ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಇಂತಹ ಕಾರ್ಯಕ್ರಮಗಳಲ್ಲಿ ತುಳುನಾಡಿನ ಸಂಕೇತಗಳನ್ನು ಧರಿಸುವ ಮೂಲಕ ಗೌರವ ಸಲ್ಲಿಸುವುದು ಇತರರಿಗೂ ಪ್ರೇರಣೆಯಾಗಬಲ್ಲದು. ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವಿಸುವ ಇಂತಹ ಕಾರ್ಯಗಳು ಹೆಚ್ಚಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.