
ಕಾಸರಗೋಡು: ಶ್ರೀ ಮದನಂತೇಶ್ವರ ವಿನಾಯಕ ದೇವಸ್ಥಾನ ಮಧೂರು ಇಲ್ಲಿ ಜೈ ತುಳುನಾಡ್ ಕಾಸರಗೋಡು ವಲಯ ಸಮಿತಿ ಹಾಗೂ ಮದನಂತೇಶ್ವರ ವಿನಾಯಕ ಸೇವಾ ಸಮಿತಿ ಇದರ ಕೂಡುವಿಕೆಯೊಂದಿಗೆ, ತುಳು ಲಿಪಿ ಬ್ರಹ್ಮನೆಂದು ಖ್ಯಾತಿಯಾದ ಡಾ. ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಇವರ ಜನ್ಮದಿನವನ್ನು ವಿಶ್ವ ತುಳು ಲಿಪಿ ದಿನವನ್ನಾಗಿ ಆಚರಿಸುವುದರೊಂದಿಗೆ ಮಧೂರು ದೇವಸ್ಥಾನಕ್ಕೆ ತುಳು ಲಿಪಿ ನಾಮಫಲಕವನ್ನು ಅನಾವರಣಗೊಳಿಸಿ. ಶ್ರೀಯುತ ಟಿ ರಾಜೇಶ್. ಮಧೂರು ಕ್ಷೇತ್ರ ನಿರ್ವಹಣಾ ಅಧಿಕಾರಿ ಯವರು ಮಾತನಾಡುತ್ತಾ ಯೋಧರ ಚರಿತ್ರೆಯನ್ನು ಹೇಳುವ ವಡಕ್ಕನ್ ಪಾಟ್ ನಲ್ಲಿ ತುಳುನಾಡು ಮತ್ತು ತುಳು ಭಾಷೆಯ ಕಥೆ ಬಗ್ಗೆ ಉಲ್ಲೇಖವಿದೆ.ನಾನು ಉತ್ತರ ಕೇರಳದಿಂದ ಬಂದವನು, ಮಲೆಯಾಳ ದೊಂದಿಗೆ ಈ ಪ್ರದೇಶದ ತುಳು ಕನ್ನಡವನ್ನು ಪ್ರೀತಿಸುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಕಲಿಯಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಇನ್ನೊಬ್ಬ ಮುಖ್ಯ ಅತಿಥಿಯಾದ ಬಹುಭಾಷಾ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ಮಾತನಾಡಿ ಪುವೆಂಪು ಅವರ ಒಡನಾಟದ ದಿನಗಳನ್ನು ನೆನಪಿಸಿ ಅವರು ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ಕೊಟ್ಟ ಅಪಾರ ಕೊಡುಗೆಯನ್ನು ತಿಳಿಸಿದರು.
ಮಲಯಾಳದ ಹೆಸರಾಂತ ಸಾಹಿತಿ ರವೀಂದ್ರನ್ ಪಾಡಿ ಮಾತನಾಡಿ ತುಳುನಾಡು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಎರಡು ರಾಜ್ಯಗಳಿಗೆ ಸೇರಿ ಹೋಗಿದೆ ಇದು ತುಳುನಾಡಾಗಿಯೇ ಇರಬೇಕಾಗಿತ್ತು ಇದಕ್ಕಾಗಿ ಬಹಳ ಹಿಂದಿನಿಂದಲೇ ಹೋರಾಟಗಳು ನಡೆದಿದೆ ಇನ್ನಾದರೂ ಇದು ತುಳುನಾಡಾಗಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತಮ ಉರ್ಲಿತಡ್ಕ. ಅಧ್ಯಕ್ಷರು ಕಾಸರಗೋಡು ಜೈ ತುಳುನಾಡ್ ಕಾಸರಗೋಡು ವಲಯ, ಇವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಯೋಗೀಶ್ ಎಂ ಆರ್ ಮಧೂರು ಗ್ರಾಮ ಪಂಚಾಯತ್ ಸದಸ್ಯರು, ಹರೀಶ್ ಆರ್ ನಗರಸಭೆ ಸದಸ್ಯರು ಮತ್ತು ತುಳು ಅಭಿಮಾನಿ, ಶ್ಯಾಮ. ಮಧ್ಯಸ್ಥರು ಮಧೂರು ಕಾರ್ಯಾಲಯ, ವಿಜಯರಾಜ ಪುನಿಂಚತ್ತಾಯ ಸಾಹಿತ್ಯ ಹಾಗೂ ಪುವೆಂಪುರವರ ಪುತ್ರ, ಮದುಕರ ಗಟ್ಟಿ ,ಜೈ ತುಳುನಾಡ್ ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಕುಮಾರಿ ಚಿತ್ರಾಕ್ಷಿ ಮುಗೇರ ತೆಗ್ಗು, ಮಂಗಳೂರು ವಲಯ ಸಮಿತಿಯ ಅಧ್ಯಕ್ಷರಾದ ರಾಜಶ್ರೀ ಚಂದ್ರಶೇಖರ ತಲಪಾಡಿ ಉಪಸ್ಥಿತರಿದ್ದರು.
ಮಿತ್ರ ಕಲಾ ವೃಂದ ಮಧೂರು ಇದರ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕಾಸರಗೋಡು ವಲಯ ಸಮಿತಿಯ ಸದಸ್ಯರುಗಳಾದ ಪ್ರವೀಶ್ ಕುಲಾಲ್ ಬೀರಿಕುಂಜೆ ಸ್ವಾಗತಿಸಿ, ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಹರಿಕಾಂತ ಕಾಸರಗೋಡು ವಂದಿಸಿದರು, ಶ್ರೀನಿವಾಸ ಆಳ್ವ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಕೃಷ್ಣ ಪ್ರಸಾದ್ ಕುಲಾಲ್ ಕಳತ್ತೂರು, ಯಜ್ಞೇಶ್, ಚಂದ್ರಶೇಖರ ತಲಪಾಡಿ, ಪವಿತ್ರ ಮಾಡ, ಶ್ರೀಮತಿ ಅಶ್ವಿನಿ ಟಿ ರೈ, ವಿನೋದ್ ಪ್ರಸಾದ್ ರೈ ಕಾರಿಂಜ, ಚಿರಾಗ್ ಮಂಗಳೂರು ಸಹಕರಿಸಿದರು.
