
ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್‌ಗೆ ಪರಿರ‍್ತಿಸುವ ಸುಧಾರಿತ ತಂತ್ರಜ್ಞಾನ
ಬೆಳಗಾವಿ : ಚಾಲ್ತಿಯಲ್ಲಿರುವ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಪರಿಸರಸ್ನೇಹಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್-ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿರ‍್ತಿಸುವ ಪ್ರಮುಖ ಭಾರತೀಯ ಎಲೆಕ್ಟ್ರಿಕ್ ಮೊಬಿಲಿಟಿ ತಂತ್ರಜ್ಞಾನ ಸಂಸ್ಥೆಯಾದ ಗ್ರೀನ್ ಟೈಗರ್ ಮೊಬಿಲಿಟಿ, ಬೆಳಗಾವಿಯಲ್ಲಿ ತನ್ನ ನೂತನ ರಿಟ್ರೋಫಿಟ್ಟಿಂಗ್ ಕೇಂದ್ರವನ್ನು ಕರ‍್ಯಾರಂಭ ಮಾಡಿದೆ. ಭಾಗ್ಯನಗರದ 2ನೇ ಕ್ರಾಸ್‌ನಲ್ಲಿರುವ ಅಂಬಿಕಾ ಲ್ಯಾಂಡ್‌ಮರ‍್ಕ್‌ನ ಕನ್ಹಾ ಮೋಟರ‍್ಸ್ (ಸಿಟಿಎಸ್ ನಂ. 4011/2, ನೆಲಮಹಡಿ, ಫ್ಲ್ಯಾಟ್ ನಂ. 4, ಬೆಳಗಾವಿ – 590006) ಸಹಯೋಗದಲ್ಲಿ ಈ ಹೊಸ ಕೇಂದ್ರವನ್ನು ಉದ್ಘಾಟಿಸಲಾಗಿದೆ.
ಗ್ರೀನ್ ಟೈಗರ್ ಮೊಬಿಲಿಟಿಯು ಸ್ಥಳೀಯವಾಗಿ ಪೇಟೆಂಟ್ ಪಡೆದ ಇವಿ ರಿಟ್ರೋಫಿಟ್ ತಂತ್ರಜ್ಞಾನ ವೇದಿಕೆಯನ್ನು ರೂಪಿಸಿದ್ದು, ಇದು ಸವಾರರಿಗೆ ತಮ್ಮ ಹಳೆಯ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಸಂಪರ‍್ಣ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಿಕ್ + ಪೆಟ್ರೋಲ್ (ಹೈಬ್ರಿಡ್) ವಾಹನಗಳನ್ನಾಗಿ ಸುಲಭವಾಗಿ ಬದಲಾಯಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದ ಗ್ರಾಹಕರು ಈಗಾಗಲೇ ಹೊಂದಿರುವ, ತಮಗೆ ಪರಿಚಿತವಿರುವ ಹಾಗೂ ನಂಬಿಕಸ್ಥ ವಾಹನವನ್ನೇ ಮುಂದುವರಿಸಿಕೊಂಡು ಹೋಗುವ ಜತೆಗೆ, ಎಲೆಕ್ಟ್ರಿಕ್ ಮೊಬಿಲಿಟಿಗೆ ಹೆಚ್ಚು ಮಿತವ್ಯಯಕಾರಿಯಾಗಿ ಬದಲಾಗಲು ಸಾಧ್ಯವಾಗಲಿದೆ.
ಸಂಸ್ಥೆಯು ಈಗಾಗಲೇ ಬೆಂಗಳೂರು, ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ 1,500ಕ್ಕೂ ಹೆಚ್ಚು ಗ್ರಾಹಕರಿಗೆ ಈ ಸೇವೆ ಒದಗಿಸಿದೆ. ಮುಂದಿನ ದಿನಗಳಲ್ಲಿ ಕೊಲ್ಹಾಪುರ ಜಿಲ್ಲೆ, ಪುಣೆ, ಹುಬ್ಬಳ್ಳಿ ಸೇರಿದಂತೆ ಮಹಾರಾಷ್ಟ್ರ ಮತ್ತು ರ‍್ನಾಟಕದಾದ್ಯಂತ 10 ಹೊಸ ಸ್ಥಳಗಳಲ್ಲಿ ಕೇಂದ್ರಗಳನ್ನು ಆರಂಭಿಸಲು ಸಜ್ಜಾಗಿದ್ದು, ರಿಟ್ರೋಫಿಟ್ ಆಧಾರಿತ ಎಲೆಕ್ಟ್ರಿಕ್ ಮೊಬಿಲಿಟಿಗೆ ಗ್ರಾಹಕರಿಂದ ದೊರೆಯುತ್ತಿರುವ ಹೆಚ್ಚುತ್ತಿರುವ ಮನ್ನಣೆಯನ್ನು ಇದು ಬಿಂಬಿಸುತ್ತದೆ. ಗ್ರೀನ್ ಟೈಗರ್‌ನ ಪರಿಹಾರಗಳು ಎಆರ್‌ಎಐ ಮತ್ತು ಆರ್‌ಟಿಒ ನಿಯಮಾವಳಿಗಳ ಅನುಸರಣೆ, ಸುಲಭ ಸಾಲ ಸೌಲಭ್ಯ, ವಿಮೆ ಮತ್ತು ರಸ್ತೆಬದಿಯ ತರ‍್ತು ನೆರವು (ಆರ್ ಎಸ್ ಎ) ಸೇವೆಗಳನ್ನು ಒಟ್ಟಾಗಿ ಒಳಗೊಂಡಿದ್ದು, ಗ್ರಾಹಕರಿಗೆ ಈ ಪರಿರ‍್ತನೆಯ ಹಾದಿಯನ್ನು ಅತ್ಯಂತ ಸುಲಭ ಹಾಗೂ ಪ್ರಾಯೋಗಿಕವಾಗಿಸುತ್ತವೆ. ಇದು ಹಳೆಯ ದ್ವಿಚಕ್ರ ವಾಹನಗಳ ಬಾಳಿಕೆಯನ್ನು ವಿಸ್ತರಿಸುವುದರ ಜತೆಗೆ ಇವಿ ತಂತ್ರಜ್ಞಾನ ಅಳವಡಿಕೆಯ ವೆಚ್ಚವನ್ನೂ ಗಣನೀಯವಾಗಿ ತಗ್ಗಿಸುತ್ತದೆ.

ದಿನೇದಿನೆ ಹೆಚ್ಚುತ್ತಿರುವ ಇಂಧನ ದರ ಮತ್ತು ಮಾಲಿನ್ಯರಹಿತ ಸಾರಿಗೆಯ ಕಡೆಗೆ ಸರ‍್ವಜನಿಕರಲ್ಲಿ ಹೆಚ್ಚುತ್ತಿರುವ ಆಸಕ್ತಿಯ ನಡುವೆ, ಈ ಸುಧಾರಿತ ತಂತ್ರಜ್ಞಾನವು ಹೊಸ ವಾಹನ ಖರೀದಿಗೆ ಅತ್ಯುತ್ತಮ ರ‍್ಯಾಯವಾಗಿದ್ದು, ವಾಹನ ಚಾಲನಾ ವೆಚ್ಚವನ್ನೂ ಕಡಿಮೆ ಮಾಡುತ್ತದೆ. ವಾಹನದ ಹೊಂದಾಣಿಕೆ ಮತ್ತು ಅನ್ವಯವಾಗುವ ಅನುಮೋದನೆಗಳಿಗೆ ಒಳಪಟ್ಟು ಹೋಂಡಾ, ಹೀರೋ, ಟಿವಿಎಸ್, ಯಮಹಾ ಮತ್ತು ಸುಜುಕಿ ಸೇರಿದಂತೆ ಪ್ರಮುಖ ಕಂಪನಿಗಳ ಆಯ್ದ ಮಾಡೆಲ್‌ಗಳ ದ್ವಿಚಕ್ರ ವಾಹನಗಳಿಗೆ ಗ್ರೀನ್ ಟೈಗರ್ ಮೊಬಿಲಿಟಿ ಈ ಪರಿರ‍್ತನಾ ಸೌಲಭ್ಯ ಒದಗಿಸುತ್ತಿದೆ.
ಈ ನೂತನ ಶೋರೂಮ್ ಸ್ಥಳೀಯ ಸವಾರರಿಗೆ ತಮ್ಮ ವಾಹನದ ಹೊಂದಾಣಿಕೆ, ಲಭ್ಯವಿರುವ ಪರಿರ‍್ತನೆಯ ಆಯ್ಕೆಗಳು ಮತ್ತು ಅದರ ಸಂಪರ‍್ಣ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆಯಲು ಪ್ರಮುಖ ಸಂರ‍್ಕ ಕೇಂದ್ರವಾಗಿ ಕರ‍್ಯನರ‍್ವಹಿಸಲಿದೆ. ತನ್ನ ವಿಸ್ತಾರವಾದ ಜಾಲದ ಮೂಲಕ ರಿಟ್ರೋಫಿಟ್ ತಂತ್ರಜ್ಞಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಸಾಂಪ್ರದಾಯಿಕ ಪೆಟ್ರೋಲ್ ವಾಹನಗಳಿಗೆ ಕೈಗೆಟುಕುವ ರ‍್ಯಾಯವನ್ನು ಕಂಡುಕೊಳ್ಳಲು ಹೆಚ್ಚಿನ ದ್ವಿಚಕ್ರ ವಾಹನ ಸವಾರರಿಗೆ ನೆರವಾಗುವುದು ಗ್ರೀನ್ ಟೈಗರ್ ಮೊಬಿಲಿಟಿಯ ಮುಖ್ಯ ಗುರಿಯಾಗಿದೆ.
ಬೆಳಗಾವಿ ಕೇಂದ್ರದ ಆರಂಭದ ಕುರಿತು ಮಾತನಾಡಿದ ಗ್ರೀನ್ ಟೈಗರ್ ಮೊಬಿಲಿಟಿಯ ಸಂಸ್ಥಾಪಕ ಮತ್ತು ಸಿಇಒ ಆಶಿಶ್ ದೊಕಾನಿಯಾ ಅವರು, “ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಕ್ರಾಂತಿಯು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ, ದ್ವಿಚಕ್ರ ವಾಹನ ಪರಿಸರ ವ್ಯವಸ್ಥೆಯ ಭಾಗವಾಗಿರುವ ಲಕ್ಷಾಂತರ ಜನರಿಗೂ ಪ್ರಯೋಜನ ತಂದುಕೊಡಬೇಕು. ರಿಟ್ರೋಫಿಟ್ಮೆಂಟ್ ವಿಧಾನವು ಇವಿ ಅಳವಡಿಕೆಯನ್ನು ಹೆಚ್ಚು ರ‍್ಥಿಕವಾಗಿಸುವುದಲ್ಲದೆ, ಹಳೆಯ ವಾಹನಗಳನ್ನು ಗುಜರಿಗೆ ಹಾಕುವ (ಸ್ಕ್ರ‍್ಯಾಪಿಂಗ್) ಸವಾಲನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದೇ ವೇಳೆ, ಆರಂಭವಾಗುವ ಪ್ರತಿಯೊಂದು ಹೊಸ ಕೇಂದ್ರವೂ ಸ್ಥಳೀಯ ಉದ್ಯಮಿಗಳಿಗೆ ವ್ಯಾಪಾರಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಎಲೆಕ್ಟ್ರಿಕ್ ವಾಹನ ಯುಗಕ್ಕೆ ತಕ್ಕಂತೆ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಮೆಕ್ಯಾನಿಕ್ ಹಾಗೂ ತಂತ್ರಜ್ಞರಿಗೆ ಉತ್ತಮ ವೇದಿಕೆ ಕಲ್ಪಿಸುತ್ತದೆ,” ಎಂದರು.
ಗ್ರೀನ್ ಟೈಗರ್ ಮೊಬಿಲಿಟಿಯ ಸಿಒಒ ಪ್ರಜ್ಞಾ ಗೋಯಲ್ ಅವರು ಮಾತನಾಡಿ, “ಭಾರತದ ಎಲೆಕ್ಟ್ರಿಕ್-ಮೊಬಿಲಿಟಿ ಪಯಣವು ಕೇವಲ ನೂತನ ಇವಿ ವಾಹನಗಳ ಮಾರಾಟಕ್ಕಷ್ಟೇ ಸೀಮಿತವಾಗಿರಬಾರದು. ರಸ್ತೆಗಳಲ್ಲಿ ಈಗಾಗಲೇ ಚಲಿಸುತ್ತಿರುವ ಲಕ್ಷಾಂತರ ಪೆಟ್ರೋಲ್ ದ್ವಿಚಕ್ರ ವಾಹನಗಳು ಇನ್ನೂ ಸುಸ್ಥಿತಿಯಲ್ಲಿದ್ದು, ಅಧಿಕೃತ ಎಲೆಕ್ಟ್ರಿಕ್ ರಿಟ್ರೋಫಿಟ್ ತಂತ್ರಜ್ಞಾನದ ಮೂಲಕ ಅಂತಹ ರ‍್ಹ ವಾಹನಗಳಿಗೆ ಮಾಲಿನ್ಯರಹಿತ ಮತ್ತು ಕೈಗೆಟುಕುವ ಹೊಸ ಜೀವ ನೀಡುವುದು ನಮ್ಮ ಆಶಯವಾಗಿದೆ,” ಎಂದು ತಿಳಿಸಿದರು.
ಕನ್ಹಾ ಮೋಟರ‍್ಸ್‌ನ ಮಾಲೀಕರಾದ ಲೋಕೇಶ್ ತುಂಗಾರಿಯಾ ಅವರು ಮಾತನಾಡಿ, “ಕನ್ಹಾ ಮೋಟರ‍್ಸ್ ಸಹಯೋಗದೊಂದಿಗೆ ಗ್ರೀನ್ ಟೈಗರ್ ಶೋರೂಮ್ ಆರಂಭಗೊಂಡಿರುವುದು ಎಲ್ಲರಿಗೂ ಎಲೆಕ್ಟ್ರಿಕ್ ಮೊಬಿಲಿಯನ್ನು ಸುಲಭವಾಗಿ ಸಿಗುವಂತೆ ಮತ್ತು ಕೈಗೆಟುಕುವಂತೆ ಮಾಡುವ ನಮ್ಮ ಪಯಣದ ಮಹತ್ವದ ಮೈಲಿಗಲ್ಲು. ಸವಾರರು ತಮ್ಮ ಚಾಲ್ತಿಯ ಪೆಟ್ರೋಲ್ ಬೈಕ್ ಮತ್ತು ಸ್ಕೂಟರ್‌ಗಳನ್ನು ಸ್ವಚ್ಛ, ಮಿತವ್ಯಯದ ವಾಹನಗಳನ್ನಾಗಿ ಬದಲಾಯಿಸಿಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ಹಸಿರು ಭವಿಷ್ಯದತ್ತ ಮುನ್ನಡೆಯನ್ನು ತ್ವರಿತಗೊಳಿಸುವುದು ನಮ್ಮ ಗುರಿ,” ಎಂದು ರ‍್ಷ ವ್ಯಕ್ತಪಡಿಸಿದರು.
ಈ ಕೇಂದ್ರವು ಉತ್ತರ ರ‍್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ತ್ವರಿತ ಇವಿ ಅಳವಡಿಕೆ, ಕೈಗೆಟುಕುವ ಸಂಚಾರ, ಸ್ಥಳೀಯ ಉದ್ಯಮಶೀಲತೆ, ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ತಂತ್ರಜ್ಞರ ಕೌಶಲ್ಯಾಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ನಿರೀಕ್ಷೆಯಿದೆ.
