ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಅಂಗ ಸಂಸ್ಥೆ ಅಬ್ಬನಡ್ಕ ಸೇವಾ ಟ್ರಸ್ಟಿನ ಅಧ್ಯಕ್ಷರಾಗಿ ಪ್ರೇಮ್ ಕುಲಾಲ್, ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ ಬಿರೋಟ್ಟು ಆಯ್ಕೆ‌

0
48

ಅಬ್ಬನಡ್ಕ ಸೇವಾ ಟ್ರಸ್ಟಿನ 157 ಸೇವಾ ಯೋಜನೆ ಮೂಲಕ ಈವರಿಗೆ ರೂಪಾಯಿ 20 ಲಕ್ಷಕ್ಕೂ ಅಧಿಕ ಮೊತ್ತದ ನೆರವು ಹಸ್ತಾಂತರ

ಸೇವೆ ಸಂಸ್ಕೃತಿ ಕ್ರೀಡೆ ಸಂಸ್ಥೆಯ ಮೂಲ ಉದ್ದೇಶವಾಗಿದ್ದರು ಯುವ ಜನರಲ್ಲಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ, ಆರೋಗ್ಯ, ಸ್ವಚ್ಛತೆ, ಸಾಹಿತ್ಯ, ಶೈಕ್ಷಣಿಕ ಆರ್ಥಿಕ ಬೆಳವಣಿಗೆಯ ಉದ್ದೇಶವನ್ನು ಹೊಂದಿರುವ 27 ವರ್ಷಗಳ ಸುದೀರ್ಘ ಇತಿಹಾಸವಿರುವ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಮಾಜಮುಖಿ ಸೇವೆಯ ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನ ಸೆಳೆದ ಅಬ್ಬನಡ್ಕ ಸೇವಾ ಟ್ರಸ್ಟಿನ ಮೂಲಕ ವೈದ್ಯಕೀಯ ನೆರವು, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ, ವೀಲ್ ಚೇರ್ ಹಸ್ತಾಂತರ, ಸೋಲಾರ್ ವಿದ್ಯುತ್ ದೀಪದ ಕೊಡುಗೆ, ಆರೋಗ್ಯ ತಪಾಸಣಾ ಶಿಬಿರ, ಅನಾಥಾಶ್ರಮಗಳಿಗೆ ಆಹಾರ ಸಾಮಗ್ರಿ ವಿತರಣೆ, ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಶಾಶ್ವತ ದಾರಿ ಸೂಚನಾ ಫಲಕ ಅಳವಡಿಕೆ, ಬಡ ಕುಟುಂಬಕ್ಕೆ ಆರ್ಥಿಕ ನೆರವು, ಗೋಶಾಲೆಗೆ ಬೈಹುಲ್ಲು ಹಸ್ತಾಂತರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಸ್ಥೆಯ ರಜತ ಸಂಭ್ರಮದ ಸವಿನೆನಪಿಗಾಗಿ ಬೋಳ ಗ್ರಾಮದ ಬಡ ಕುಟುಂಬಕ್ಕೆ ರುಪಾಯಿ 7 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಾಣ ಹಾಗೂ ಪ್ರಸ್ತುತ ನಂದಳಿಕೆ ಗ್ರಾಮದ ಅಬ್ಬನಡ್ಕದ ಕೊರಗ ಸಮುದಾಯದ ಕುಟುಂಬವೊಂದಕ್ಕೆ ಮನೆ ನಿರ್ಮಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು ಈ ಎಲ್ಲ ಸೇವಾ ಯೋಜನೆಗಳು ಸೇರಿದಂತೆ ಇವರಿಗೆ 157 ಸೇವಾ ಯೋಜನೆ ಮೂಲಕ ರೂಪಾಯಿ 20 ಲಕ್ಷಕ್ಕೂ ಅಧಿಕ ಮೊತ್ತದ ಸಹಕಾರವನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಅಬ್ಬನಡ್ಕ ಸೇವಾ ಟ್ರಸ್ಟಿನ ಮೂಲಕ ನೀಡಿರುತ್ತೇವೆ.

ಅಬ್ಬನಡ್ಕ ಸೇವಾ ಟ್ರಸ್ಟಿನ ನೂತನ ಅಧ್ಯಕ್ಷರಾಗಿ ಇನ್ನಾ ಪ್ರೇಮ್ ಕುಲಾಲ್ ಹಾಗೂ ಕಾರ್ಯದರ್ಶಿಯಾಗಿ ಬಿರೋಟ್ಟು ದಿನೇಶ್ ಪೂಜಾರಿ ಅವರನ್ನು ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.