ಪ್ರಕೃತಿ ರಮಣೀಯ ಪುಣ್ಯ ಭೂಮಿ- ಬಲ್ಲಂಗೇರಿ ಶ್ರೀ ಸೂರ್ಯನಾರಾಯಣ ಕ್ಷೇತ್ರ

0
24

-ಮಂದಾರ ರಾಜೇಶ್ ಭಟ್

ದಕ್ಷಿಣ ಕನ್ನಡ ಅಥವಾ ಕರಾವಳಿಯ ನಿಸರ್ಗದ ಮಡಿಲಲ್ಲಿ ಕಂಗೊಳಿಸುವ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಲ್ಲಂಗೇರಿ ಶ್ರೀ ಸೂರ್ಯನಾರಾಯಣ ಕ್ಷೇತ್ರವು ಕೇವಲ ಒಂದು ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲದೆ, ಅಧ್ಯಾತ್ಮಿಕ ಸಾಧಕರಿಗೆ ಸತ್ಯದ ಅನುಭೂತಿ ನೀಡುವ ಪರಮ ಪವಿತ್ರ ತಾಣವಾಗಿದೆ.

ನದಿ ತೀರದಲ್ಲಿ ನೆಲೆಗೊಂಡಿರುವ ಈ ದೇವಸ್ಥಾನದ ಸುತ್ತಮುತ್ತಲಿನ ಪರಿಸರವು ಅದ್ಭುತ ಪ್ರಕೃತಿ ಸೌಂದರ್ಯದಿಂದ ಕೂಡಿದೆ.
ಹಸಿರಿನ ಸಿರಿ, ಪ್ರಶಾಂತ ವಾತಾವರಣ ಮತ್ತು ನೈಸರ್ಗಿಕ ಶುದ್ಧ ಗಾಳಿಯು ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತನ ಮನಸ್ಸಿಗೆ ಅಪಾರ ನೆಮ್ಮದಿಯನ್ನು ನೀಡುತ್ತದೆ.

​ಇತಿಹಾಸ ಮತ್ತು ನಂಬಿಕೆ

​ಹಿಂದಿನ ಕಾಲದಲ್ಲಿ ಈ ಪುಣ್ಯ ಭೂಮಿಯು ಮಹಾನ್ ಋಷಿಮುನಿಗಳ ತಪೋಭೂಮಿಯಾಗಿತ್ತು ಎಂಬ ದೃಢ ನಂಬಿಕೆ ಭಕ್ತರಲ್ಲಿದೆ.

ಈ ಕ್ಷೇತ್ರದ ಪಾವಿತ್ರ್ಯತೆ ಹಾಗೂ ದೈವಿಕತೆಯ ಕುರಿತು ಭಕ್ತರಲ್ಲಿ ಅಪಾರ ನಂಬಿಕೆ ಇದೆ ಇದು ಈ ಕ್ಷೇತ್ರದ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ.

“ಭಕ್ತರ ಸಕಲ ಅಭಿಷ್ಟಗಳನ್ನು ನೆರವೇರಿಸುವ ಕಾಮಧೇನು ಬಲ್ಲಂಗೇರಿ ಸೂರ್ಯನಾರಾಯಣ” ಎಂಬುದು ಇಲ್ಲಿನ ಭಕ್ತರ ಅಚಲ ನಂಬಿಕೆಯಾಗಿದೆ.

​ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಮಹೋತ್ಸವ

​ಪವಿತ್ರ ಕ್ಷೇತ್ರದಲ್ಲಿ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಇದನ್ನು ಮುಂದುವರಿಸುವ ನಿಟ್ಟಿನಲ್ಲಿ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮವ

ದಿನಾಂಕ 07 ಫೆಬ್ರವರಿ 2027 ರಿಂದ 10 ಫೆಬ್ರವರಿ 2027 ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ

ಭಕ್ತಾದಿಗಳಿಗೆ ವಿನಂತಿ

ಶ್ರೀ ಸೂರ್ಯನಾರಾಯಣ ದೇವರ ಜೀರ್ಣೋದ್ಧಾರ ಹಾಗೂ ನೂತನ ಕ್ಷೇತ್ರ ನಿರ್ಮಾಣದ ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಭಕ್ತಾದಿಗಳು ತನು-ಮನ-ಧನದಿಂದ ಸಹಕರಿಸುವಂತೆ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಧಾರ್ಮಿಕ ಸೇವೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಶ್ರೀ ಸೂರ್ಯನಾರಾಯಣ ಆರಾಧನಾ ಟ್ರಸ್ಟ್ ಹಾಗೂ ಶ್ರೀ ಸೂರ್ಯನಾರಾಯಣ ದೇವಸ್ಥಾನ ಪುನರ್ ನಿರ್ಮಾಣ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ.