ತುಳುನಾಡು ವಿವಿಧ ಭಾಷೆಗಳ ನೆಲೆವೀಡು : ಡಾ.ವಾಸುದೇವ ಬೆಳ್ಳೆ

0
5

ಬಹುಭಾಷಾ ಕವಿಗೋಷ್ಠಿ : 14 ಭಾಷೆಗಳ ಕವಿತೆ ವಾಚನ

ಮಂಗಳೂರು : ತುಳುನಾಡು ವಿವಿಧ ಭಾಷೆಗಳ ನೆಲೆವೀಡು, ವಿವಿಧ ಸಮುದಾಯಗಳಲ್ಲಿ ಅಂತರ್ಗತವಾಗಿರುವ ತಮ್ಮ ತಾಯ್ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನಪಡಬೇಕು ಎಂದು ಲೇಖಕ ಡಾ.ವಾಸುದೇವ ಬೆಳ್ಳೆ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುಭವನದಲ್ಲಿ ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಸಹಯೋಗದಲ್ಲಿ
ನಡೆದ ಆರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ವಾಸುದೇವ ಬೆಳ್ಳೆ ಅವರು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲೇಖಕಿ ಡಾ.ಝೀಟಾ ಲೋಬೋ, ಕವಿ ಯು.ಕೆ ಖಾಲಿದ್ ಉಳ್ಳಾಲ್ಕಾರ್ , ವಿ.ಬಿ. ಆಚಾರ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು.
ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳಾನ್ನಾಡಿದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಶಾರದಾ ಶೆಟ್ಟಿ (ತುಳು), ವಿಜಯರಾಜ್ ಪುಣಿಂಚತ್ತಾಯ(ಶಿವಳ್ಳಿ ತುಳು), ರಾಜೇಂದ್ರ ಟಿ.ಕಾರಿಕೆ (ಮಾವಿಲನ್ ತುಳು), ಪ್ರೊ.ಸಂಜೀವ ಕುದ್ಪಾಜೆ(ಅರೆಭಾಷೆ), ಶರತ್ ಕುಮಾರ್ ತುಳುಪುಳೆ(ಚಿತ್ಪಾವನಿ), ಆಯಿಷಾ ಯು.ಕೆ (ಬ್ಯಾರಿ), ಸುಭಾಷ್ ಪೆರ್ಲ (ಮರಾಠಿ), ಆಂಡ್ರ್ಯೂ ಎಲ್. ಡಿ ಡಿಕೂನ್ಹಾ (ಕೊಂಕಣಿ), ಮಂಜುನಾಥ ಗುಂಡ್ಮಿ (ಕುಂದಗನ್ನಡ), ದೀಪಿಕಾ ಉಡುಪಿ (ಕೊರಗ ಭಾಷೆ), ಜೋತ್ಸ್ನ ಎಂ.ಕಡಂದೇಲು (ಕರಾಡ), ರವೀಂದ್ರನ್ ಪಾಡಿ (ಮಲೆಯಾಳಂ), ಶ್ರೀ ಮುದ್ರಾಡಿ (ಕನ್ನಡ), ಮಂಗಳಾ ಎಸ್. ಭಟ್ (ಕೊಂಕಣಿ), ವನಜಾಕ್ಷಿ ಪಿ. ಚೆಂಬ್ರಕಾನ(ಕನ್ನಡ) , ಎನ್ ಸುಬ್ರಾಯ ಭಟ್ (ಹವ್ಯಕ) ಅವರು ಕವಿತೆ ವಾಚಿಸಿದರು.
ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಸ್ವಾಗತಿಸಿದರು, ಸದಸ್ಯರಾದ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರ್ವಹಿಸಿದರು. ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಅವರು ವಂದಿಸಿದರು.