ಸಮಾಜ ಸೇವಕ ಉದಯ ತಲ್ಲಾಣಿ, ಬೀರಿ ರಿಗೆ “ಕಾಸರಗೋಡು ದಸರಾ ಸಾಧಕ ಸನ್ಮಾನ “

0
11

ಕಾಸರಗೋಡು ಪಾಂಗೋಡು : ಉಳ್ಳಾಲ ಬೀರಿಯ ಸಮಾಜ, ಸಾಮುದಾಯಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈಯುತ್ತಿರುವ ಶ್ರೀ ಉದಯ ತಲ್ಲಾಣಿ, ಬೀರಿ ಇವರೀಗೆ ಕಾಸರಗೋಡು ದಸರಾ ವೇದಿಕೆಯಲ್ಲಿ ಸನ್ಮಾನ ನೀಡಿ ಗೌರವಿಸಲಾಯಿತು.

ಶ್ರೀ ಪಾಂಗೋಡು ದುರ್ಗಾಪರಮೇಶ್ವರಿ ಸುಬ್ರಮಣ್ಯ ಕ್ಷೇತ್ರ ಪಾಂಗೋಡಿನಲ್ಲಿ, ಕ್ಷೇತ್ರ ಸಾಂಸ್ಕೃತಿಕ ಘಟಕ ಹಾಗೂ ಡಾ. ವಾಮನ್ ರಾವ್ ಬೇಕಲ್ ರ ಕನ್ನಡ ಭವನ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ -2026ವೇದಿಕೆಯಲ್ಲಿ ಇವರೀಗೆ ಕಾಸರಗೋಡು ದಸರಾ ಸಾಧಕ ಸನ್ಮಾನ “ನೀಡಿದರು.

ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕೋತ್ಸವ ಕಾರ್ಯಕ್ರಮ ದಲ್ಲಿ ಸಾಂಸ್ಕೃತಿಕ ಘಟಕ ಅಧ್ಯಕ್ಷರಾದ ಪಾಂಗೋಡು ಪ್ರವೀಣ್ ನಾಯ್ಕ್, ಡಾ. ಭುವನೇಶ್ವರಿ ಧಾರವಾಡ, ಮಾಧುರಿ ಕಿಶೋರ್ ಬೆಂಗಳೂರು ಮುಖ್ಯ ಅತಿಥಿಗಳಾಗಿದ್ದರು. ಡಾ. ವಾಮನ್ ರಾವ್ ಬೇಕಲ್ ಹಾಗೂ ಶ್ರೀ ಪಾಂಗೋಡು ಪ್ರವೀಣ್ ನಾಯ್ಕ್ ಪ್ರಶಸ್ತಿ ನೀಡಿದರು.