ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ “ಶಾಸ್ತ್ರೀಯ ಗಾನ ಸಂಗೀತ”

0
18

ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ವಿದುಷಿ ವಿಜಯ ಭಟ್ ನಿರ್ದೇಶನದ ನಾದಸುಧಿ ಸಂಗೀತ ಕಲಾಮಂದಿರ ಬೆಂಗಳೂರು ಇವರಿಂದ ಶಾಸ್ತ್ರೀಯ ಗಾನ ಸಂಗೀತ ಕಾರ್ಯಕ್ರಮ ಜರಗಿತು.
ಸಹಕಲಾವಿದರಾಗಿ ಲತಾ ಸಂತೋಷ ರಾವ್ ಮತ್ತು ವಾಣಿ ಜಗದೀಶ್ ರವರು ಕಾರ್ಯಕ್ರಮ ನೀಡಿದರು. ಪ್ರಣಿತ್ ಬಳ್ಕೂರಾಯ ಮತ್ತು ಬಾಲಕೃಷ್ಣ ಬಳ್ಕೂರಾಯ ಅವರು ಹಿಮ್ಮೇಳದಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು, ಪ್ರಧಾನ ಅರ್ಚಕರು, ಖ್ಯಾತ ಜ್ಯೋತಿಷ್ಯರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಸಂತೋಷ್ ರಾವ್ ಅವರು ಉಪಸ್ಥಿತರಿದ್ದರು.