ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅದ್ವಿನ್ ಎಸ್. ಸಂಪ್ಯಾಡಿಗೆ ಪ್ರಥಮ ಸ್ಥಾನ

0
8

ಮೂಡುಬಿದಿರೆ : ಶ್ರೀ ವೀರಮಾರುತಿ ಸೇವಾ ಟ್ರಸ್ಟ್ (ರಿ.), ಮೂಡುಬಿದಿರೆ ಇದರ ವತಿಯಿಂದ 37ನೇ ವರ್ಷದ ಮೂಡುಬಿದಿರೆ ಶ್ರೀ ಶಾರದೋತ್ಸವ ಸಂಭ್ರಮದ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ಯೋಗಾಸನ ಮತ್ತು ಸಾಂಸ್ಕೃತಿಕ ಸ್ಪರ್ಧೆ–2026ರಲ್ಲಿ ಕಿರಿಯರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಅದ್ವಿನ್ ಎಸ್. ಸಂಪ್ಯಾಡಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಇವರು ನಿರಂತರ ಯೋಗ ಕೇಂದ್ರ ಸುಳ್ಯದ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ಇವರಲ್ಲಿ ಯೋಗ ತರಬೇತಿ ಪಡೆಯುತ್ತಿದ್ದಾರೆ.

ಅದ್ವಿನ್, ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಇವರು ಶಿರಾಡಿ ಗ್ರಾಮದ ಸುದರ್ಶನ್ ಕುಮಾರ್ ಹಾಗೂ ರಮ್ಯಾ ದಂಪತಿಯ ಸುಪುತ್ರ.