ಶ್ರೀ ಕ್ಷೇತ್ರ ಶಂಕರಪುರ : 1080 ಬಾರಿ ಹನುಮಾನ್ ಚಾಲೀಸ್ ಪಠಣ

0
22

ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ 19 ಅಡಿ ಎತ್ತರದ ಕೃಷ್ಣ ಶಿಲೆಯ ಮುಖ್ಯಪ್ರಾಣ ಸನ್ನಿಧಿಯಲ್ಲಿ 108 ಭಕ್ತರಿಂದ 1080 ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ಇಂದು ನಡೆಯಿತು.

ಶ್ರೀ ಕ್ಷೇತ್ರದ ಶ್ರೀ ಸಾಯಿ ಈಶ್ವರ್ ಗುರೂಜಿ ದೀಪ ಬೆಳಗಿಸಿ ಚಾಲನೆ ನೀಡಿದರು. ಗುರೂಜಿಯವರ ಪಂಚಾಶತ್ ಜನ್ಮ ವೈಭವದ ಅಂಗವಾಗಿ ದೇಶದಲ್ಲಿ ಪ್ರಕೃತಿ ವಿಕೋಪಗಳು ದೂರವಾಗಬೇಕು, ರೈತರು ಸೈನಿಕರು ಸೇರಿದಂತೆ ಎಲ್ಲರಿಗೂ ಶ್ರೇಯಸ್ಸು , ಗೋ ಹತ್ಯೆ ನಿಷೇಧ ಜಾರಿ ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆಯಾಗಬೇಕು ಎಂಬ ಸಂಕಲ್ಪದಿಂದ ಈ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಟ್ರಸ್ಟಿ ಸತೀಶ್ ದೇವಾಡಿಗ ಆಡಳಿತ ಮಂಡಳಿಯ , ಲಾವಣ್ಯ, ವಿನೋದ್ ಕುಮಾರ್, ರಾಜೇಶ್ ಇನ್ನಂಜೆ, ಶ್ವೇತಾ, ಜಯರಾಮ ಶೆಟ್ಟಿಗಾರ್, ಪ್ರತಿಮ ಪ್ರಭಾಕರ್, ಜ್ಯೋತಿ ಶೆಟ್ಟಿ, ಚೇತನ ಶೆಟ್ಟಿ, ವಿಘ್ನೇಶ್ ನೀಲಾವರ ನಾಗರಾಜ್ ಬೈಂದೂರು, ರಾಘವೇಂದ್ರ ಪ್ರಭು ಕವಾ೯ಲು ಮುಂತಾದವರು ಉಪಸ್ಥಿತರಿದ್ದರು.