ಮಡಿಕೇರಿಯ ಜಾನಪದ ದಸರಾ ಉಧ್ಘಾಟಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

0
10

ಮಡಿಕೇರಿ : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮಡಿಕೇರಿ ನಗರ ದಸರಾ ಸಮಿತಿ (ರಿ) ಮಡಿಕೇರಿ ದಸರಾ ಸಾಂಸ್ಕೃತಿ ಸಮಿತಿ ಸಹಯೋಗದಲ್ಲಿ ಕೊಡಗು ಜಾನಪದ ಪರಿಷತ್ ಇದರ ವತಿಯಿಂದ ಆರನೇ ವರ್ಷದ ಜನಪದ ದಸರಾ 2026ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಉದ್ಘಾಟನೆ ಮಾಡಿ ಮಾತನಾಡಿದ ಮಾನ್ಯ ಶಾಸಕರು, ಐತಿಹಾಸಿಕವಾಗಿ ಮಹತ್ವವುಳ್ಳಂತಹ ಮಡಿಕೇರಿಯ ದಸರದಲ್ಲಿ ಜಾನಪದ ಕಾರ್ಯಕ್ರಮವು ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತಿದೆ.

ಜಾನಪದ ದಸರದಲ್ಲಿ ಹಲವಾರು ತಂಡಗಳು ತಮ್ಮ ಜಾನಪದ ಕಲಾಪ್ರದರ್ಶನ ಮಾಡುವುದರೊಂದಿಗೆ ನಾಡಿನ ಜನತೆಗೆ ಹಾಗೂ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಾರ್ವಜನಿಕರಿಗೆ ನಾಡಿನ ಜಾನಪದ ಸಂಸ್ಕೃತಿಯ ಹಾಗೂ ವೈಭವದ ಪರಿಚಯವನ್ನು ಮಾಡುತ್ತಿರುವುದು ಹಾಗೂ ಜನರ ಮನಸ್ಸನ್ನು ಸೂರ್ಯಗೊಳ್ಳುತ್ತಿರುವುದು ದಸರಾ ಹಬ್ಬದ ಮತ್ತೊಂದು ವಿಶೇಷವಾಗಿದೆ. ಇದೇ ರೀತಿ ಗೋಣಿಕೊಪ್ಪ ದಸರಾದಲ್ಲೂ ಸಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಎರಡು ದಸರಾ ಕಾರ್ಯಕ್ರಮಗಳು ಕೊಡಗಿನ ಜನತೆಗೆ ರಸದೌತಣ ನೀಡುವುದರೊಂದಿಗೆ ನವರಾತ್ರಿಯ ಆಚರಣೆಯನ್ನು ಮತ್ತಷ್ಟು ವಿಜೃಂಭಣೆಯಿಂದ ತೋರುವಂತೆ ಮಾಡಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಬಿಜಿ ಅನಂತಶಯನ, ಮಡಿಕೇರಿ ನಗರ ದಸರ ಸಮಿತಿ ಅಧ್ಯಕ್ಷರು ಶ್ರೀಮತಿ ಪಿ ಕಲಾವತಿ, ಉಪಾಧ್ಯಕ್ಷರು ಮಹೇಶ್ ಜೈನಿ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮಡಿಕೇರಿ ನಗರದ ಸರ ಸಮಿತಿ ಕಾರ್ಯಾಧ್ಯಕ್ಷರು ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತ, ಕೊಡಗು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್ ಐ ಮುನೀರ್ ಅಹ್ಮದ್, ಖಜಾಂಚಿ ಸಂಪತ್ ಕುಮಾರ್, ಕಾರ್ಯದರ್ಶಿ ಉಜ್ವಲ್ ರಂಜಿತ್, ಸಂಚಾಲಕರು ಅನಿಲ್ ಎಚ್ ಟಿ, ಹಾಗೂ ಜಾನಪದ ಗಾಯಕರು, ಕೊಡಗು ಜಾನಪದ ಘಟಕಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ