ಡಾ. ಸುರೇಶ್ ನೆಗಳಗುಳಿ ಅವರಿಗೆ ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ

0
17

ಮಂಗಳೂರು : ಮೂಲತಃ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ನೆಗಳಗುಳಿಯವರಾದ, ಪ್ರಸ್ತುತ ಮಂಗಳೂರಿನ ಕಣಚೂರು ಆಯುರ್ವೇದ ಆಸ್ಪತ್ರೆಯ ಅಧೀಕ್ಷಕರು, ಮಂಗಳಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು, ಮೂಲವ್ಯಾಧಿ ತಜ್ಞರು, ಬಜಾಲ್ ಪಕ್ಕಳದ ಸುಹಾಸ್ ಕ್ಲಿನಿಕ್ ನ ವೈದ್ಯರು ಹಾಗೂ ಪ್ರಖ್ಯಾತ ಗಝಲ್ ಕವಿ, ಮಕ್ಕಳ ಸಾಹಿತಿ ಡಾ. ಸುರೇಶ್ ನೆಗಳಗುಳಿ ಅವರಿಗೆ ಪ್ರತಿಷ್ಠಿತ “ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ-2026”

ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ, ಕಾಸರಗೋಡು ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಆಯೋಜಿಸಿದ್ದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2026 ಹಾಗೂ ರಾಷ್ಟ್ರೀಯ ಕವಿ ಸಮ್ಮೇಳನ-2026 ರ ಅಂಗವಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು.

ದಿನಾಂಕ 18-10-2026 ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಡಾ. ಸುರೇಶ್ ನೆಗಳಗುಳಿ ಅವರ ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರದ ಸಮಗ್ರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಭವನದ ಪ್ರಮುಖರಾದ ಪ್ರದೀಪ್ ಬೇಕಲ್, ಡಾ. ಕೆ.ಎನ್. ವೆಂಕಟರಮಣ ಹೊಳ್ಳ , ಡಾ. ವಾಮನ್ ರಾವ್ ಬೇಕಲ್, ವಸಂತ್ ಕೆರೆಮನೆ, ಸಂದ್ಯಾರಾಣಿ ಟೀಚರ್ ಚು. ಸಾ ಪ ಸ್ಥಾಪಕ ಎಂ ಜಿ ಆರ್ ಅರಸ್, ಇರಾ ನೇಮುಪೂಜಾರಿ ಜಯಾನಂದ ಪೆರಾಜೆ ಪಿ ವಿ ಪ್ರದೀಪ್ ಕುಮಾರ್ ಗುಣಾಜೆ ರಾಮಚಂದ್ರ ಭಟ್ ಸತ್ಯವತಿ ಭಟ್ ಕೊಳಚಪ್ಪು ಗೋವಿಂದ ಭಟ್ ಕೊಲಚಪ್ಪೆ ಮಲ್ಲಿಕಾ ಜೆ ರೈ ಮುಂತಾದವರು ಉಪಸ್ಥಿತರಿದ್ದರು.