
ದಾವಣಗೆರೆ : ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಹೊಟ್ಟೆಪಾಡು ತಪ್ಪಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಖಿನ್ನತೆಯ ಮನಸ್ಸುಗಳು ಪುಳಕಿತವಾಗುತ್ತದೆ. ಸಂಗೀತ ಪರಂಪರೆ ಮಾನವನ ಜೀವನದ ಜ್ಞಾನ, ಪರಿಜ್ಞಾನ ಅಭಿವೃದ್ದಿವಾಗುತ್ತದೆ ಎಂದು ದಾವಣಗೆರೆಯ ಶ್ರೀ ಗುರು ಪಂಚಾಕ್ಷರ ಸಂಗೀತ ವಿದ್ಯಾಲಯದ ದ್ವಾನ್ ಶ್ರೀ ಪಂಡಿತ್ ಶಿವಕುಮಾರಸ್ವಾಮಿಯವರು ತಮ್ಮ ಮನದಾಳದ ಮಾತು ಹಂಚಿಕೊಂಡರು.
ದಾವಣಗೆರೆಯ ವಿದ್ಯಾನಗರ ರಸ್ತೆಯಲ್ಲಿ ಇರುವ ಕುವೆಂಪು ಕನ್ನಡ ಭವನದಲ್ಲಿ ಇತ್ತೀಚಿಗೆ ನಗರದ ಎಸ್.ಎಸ್.ಮ್ಯೂಸಿಕ್ ಸ್ಟುಡಿಯೋ ಹಮ್ಮಿಕೊಂಡ ರಾಜ್ಯ ಮಟ್ಟದ ಕನ್ನಡ ಕರೋಕೆ ಗಾಯನ ಸ್ಪರ್ಧೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ದಾವಣಗೆರೆಯ ಬಿ.ಎಡ್. ಕಾಲೇಜಿನ ಉಪನ್ಯಾಸಕರಾದ ಡಿ.ಪಿ.ಮೆಹೂಬ್ ಅಲಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಈ ಸಾಂಸ್ಕೃತಿಕ ಚಟುವಟಿಕೆಗಳಿಂದ ಮುಂದಿನ ಜೀವನದಲ್ಲಿ ಭವ್ಯ ದಿವ್ಯ ಸಾಧನೆ ಆಗುತ್ತದೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್ಶೆಣೈ, ಸಿನಿಮಾ ನಿರ್ದೇಶಕರಾದ ಅರ್ಜುನ್ ಮಾತನಾಡಿ, ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದು ಸಂತೋಷವಾಗುವುದು ಸಹಜ ಬಹುಮಾನಕ್ಕೆ ಅಷ್ಟೇ ಸೀಮಿತವಾಗದೇ ಸಂಗೀತ ಪರಂಪರೆಗೆ ತೊಡಗಿಸಿಕೊಂಡರೆ ಜೀವನ ಪುಳಕಿತವಾಗುತ್ತದೆ ಎಂದರು.
ಅಕ್ಟೋಬರ್ 17, 18 ಶನಿವಾರ, ಭಾನುವಾರ ಎರಡು ದಿನಗಳ ಕಾಲ ನೂರಾರು ಹಿರಿಯರು, ಕಿರಿಯರು, ಗಾಯಕರು, ಗಾಯಕಿಯರು ಭಾಗವಹಿಸಿ ಈ ಸಂಗೀತ ಸ್ಪರ್ಧೆ ತುಂಬಾ ತುಂಬಾ ಯಶಸ್ವಿಯಾಯಿತು.
ಗಾಯಕರಾದ ಪ್ರವಿಣ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಎಸ್.ಎಸ್.ಸ್ಟುಡಿಯೋ ಸಂಸ್ಥೆಯ ಸಂಸ್ಥಾಪಕರಾದ ತಿಪ್ಪೇಸ್ವಾಮಿ ಎನ್.ಆರ್. ಸ್ವಾಗತಿಸಿದರು. ಕುಮಾರಿ ಸಂಗೀತ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು ಕೊನೆಗೆ ಶ್ರೀಕಾಂತ್ ಟಿ. ವಂದನಾರ್ಪಣೆ ಮಾಡಿದರು.
ಸಂಗೀತ ಸ್ಪರ್ಧೆಯಲ್ಲಿ ಹಿರಿಯರಿಗೆ, ಕಿರಿಯಯರಿಗೆ ವಿಜೇತರಾದವರಿಗೆ ನಗದು ಬಹುಮಾನ, ಅಭಿನಂದನಾ ಪತ್ರ ಕೊರಳಿಗೆ ಪದಕ, ಸ್ಮರಣಿಕೆ ನೀಡಿ ಗೌರವಿಸಿದರು.
