ಬ್ರಹ್ಮಗಿರಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

0
28

ಉಡುಪಿ : ಬ್ರಹ್ಮಗಿರಿ ವೃತ್ತದ ಸಮೀಪ ಅಸಹಾಯಕ ಸ್ಥಿತಿಯಲ್ಲಿ ಅರೆನಗ್ನನಾಗಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜಸೇವಕರು ರಕ್ಷಿಸಿ, ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಬ್ರಹ್ಮಗಿರಿ ವೃತ್ತದ ಬಳಿ ರಸ್ತೆಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಸಮಾಜಸೇವಕರು, ಆತನನ್ನು ರಕ್ಷಿಸಿ ಸೂಕ್ತ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು, ECRC ಯೋಜನೆಯ ಪ್ರಬಂಧಕ ಸುರೇಶ್ ಎಸ್. ನಾವೂರು ಹಾಗೂ ಸಿಬ್ಬಂದಿ ತಿಲಕ್ ಪಾಲ್ಗೊಂಡಿದ್ದರು.