ಶ್ರೀ ಕ್ಷೇತ್ರ ಶಂಕರಪುರ : ದುರ್ಗಾಷ್ಟಮಿ ಸಂಭ್ರಮ 108 ಹೆಣ್ಣು ಮಕ್ಕಳಿಗೆ ಮೂಗುತಿಧಾರಣೆ

0
12

ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ ದುರ್ಗಾಷ್ಟಮಿ ಸಂಭ್ರಮ ಅಂಗವಾಗಿ ಸ್ತ್ರೀ ಸೌಭಾಗ್ಯ 108 ಹೆಣ್ಣು ಮಕ್ಕಳಿಗೆ ಮೂಗುತಿದಾರಣೆ ಕಾರ್ಯಕ್ರಮ ಇಂದು ನಡೆಯಿತು.

ಶ್ರೀ ಕ್ಷೇತ್ರ ಶಂಕರಪುರ ಏಕ ಜಾತಿ ಧರ್ಮ ಪೀಠದ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ್ ಗುರೂಜಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಸಮಾಜ ಸೇವಕಿ ಟ್ರಸ್ಟಿ ಗೀತಾಂಜಲಿ ಸುವರ್ಣ ಮಾತನಾಡಿ, ಸ್ತ್ರೀ ಸೌಭಾಗ್ಯ ಕಾರ್ಯಕ್ರಮದಲ್ಲಿ ಈಗಾಗಲೇ 1354 ಹೆಣ್ಣು ಮಕ್ಕಳಿಗೆ ಮೂಗುತಿದಾರಣೆ ನಡೆದಿದ್ದು ಇಂದು ದುರ್ಗಾಷ್ಟಮಿ ಸಂಭ್ರಮದ ಪ್ರಯುಕ್ತ 108 ಹೆಣ್ಣು ಮಕ್ಕಳಿಗೆ ಮೂಗುತಿ ಧಾರಣೆ ಮಾಡಲಾಗಿದೆ. ಕ್ಷೇತ್ರದಲ್ಲಿ ಅನೇಕ ರೀತಿಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದರು.

ಮುಂದಿನ ದಿನಗಳಲ್ಲಿ ಆತ್ಮ ತಪೋವನ ಆಶ್ರಮ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳು ನಡೆಯಲಿವೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟಿ ಸತೀಶ್ ದೇವಾಡಿಗ, ಪ್ರಕಾಶ್ ಆಚಾರ್ಯ, ರಾಜೇಶ್ ಆಚಾರ್ಯ ಆಡಳಿತ ಮಂಡಳಿಯ , ಲಾವಣ್ಯ, ವಿನೋದ್ ಕುಮಾರ್, ರಾಜೇಶ್ ಇನ್ನಂಜೆ, ಶ್ವೇತಾ, ಜಯರಾಮ ಶೆಟ್ಟಿಗಾರ್, ಪ್ರತಿಮ ಪ್ರಭಾಕರ್, ಜ್ಯೋತಿ ಶೆಟ್ಟಿ, ಚೇತನ ಶೆಟ್ಟಿ, ವಿಘ್ನೇಶ್ ನೀಲಾವರ ನಾಗರಾಜ್ ಬೈಂದೂರು, ವಿಜಯ್ ಕುಂದರ್,
ರಾಘವೇಂದ್ರ ಪ್ರಭು ಕವಾ೯ಲು ಮುಂತಾದವರು ಉಪಸ್ಥಿತರಿದ್ದರು.