ನಿಟ್ಟೆ ಶ್ರೀ ಶಾರದಾ ಪೂಜಾ ಮಹೋತ್ಸವದ 12ನೇ ವರ್ಷದ ಶೋಭಾ ಯಾತ್ರೆ ವಿಸರ್ಜನಾ ಮೆರವಣಿಗೆ

0
10

ಕಾರ್ಕಳ, ಶಾರದ ಉತ್ಸವ ಸಮಿತಿ ನಿಟ್ಟೆ ಶ್ರೀ ಶಾರದಾ ಪೂಜಾ ಮಹೋತ್ಸವದ 12ನೇ ವರ್ಷದ ಶೋಭಾ ಯಾತ್ರೆ ವಿಸರ್ಜನಾ ಮೆರವಣಿಗೆ ರವಿವಾರದಂದು ಮಹಾ ಮಂಗಳಾರತಿಯ ಬಳಿಕ ನಲ್ಕದಬೆಟ್ಟು ಬಾಕಿಮಾರ್ ವೇದಿಕೆಯಿಂದ ಹೊರಟ ವಿಸರ್ಜನ ಮೆರವಣಿಗೆಯು ವಿವಿಧ ಬಗೆಯ ವೇಷದಾರಿಗಳು, ಭಜನ ತಂಡಗಳಿಂದ ಕುಣಿತ ವಿವಿಧ ಬಗೆಯ ಟ್ಯಾಬ್ಲೆಗಳು ಮೆರೆವಣಿಗೆಯ ವಿಶೇಷವಾಗಿತ್ತು ನಾಲ್ಕೇದ ಬೆಟ್ಟು ಬಾ ಕಿಮಾರು ವೇದಿಕೆಯಿಂದ ಹೊರಟ ಶೋಭಾಯಾತ್ರೆ ಪರಪಾಡಿ ಮಾರ್ಗವಾಗಿ ಶಾಂಭವಿ ನದಿಯಲ್ಲಿ ಜಲ ಸ್ತಂಭನಗೊಂಡಿತು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸ್ಥಾಪಕ ಅಧ್ಯಕ್ಷರಾದ ನೇಮಿರಾಜ ರೈ ನಿಟ್ಟೆಯಲ್ಲಿ ಅತ್ಯುತ್ತಮ ವಿದ್ಯಾಸಂಸ್ಥೆ ಗಳು ಹೊಂದಿದ ಊರು ನಾವು ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವ ಹಾಗೂ ಶಾರದ ಉತ್ಸವಗಳನ್ನು ಬಹು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿರುತ್ತೇವೆ ನಾವು ಜಾತಿ ಮತ ಭೇದ ಹಾಗೂ ರಾಜಕೀಯವನ್ನು ಮಾಡದೆ ಈ ಉತ್ಸವವನ್ನು ಅತಿ ವಿಜೃಂಭಣೆಯಿಂದ ದಾನಿಗಳ ಸಹಾಯದಿಂದ ಆಚರಿಸಿಕೊಂಡು ಬಂದಿರುತ್ತೇವೆ. ಅದಲ್ಲದೆ ಇಲ್ಲಿ ಸಂಗ್ರಹವಾಗುವ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ನೆರವು ಆರ್ಥಿಕವಾಗಿ ಹಿಂದುಳಿದವರಿಗೆ ಸರ್ವ ರೀತಿಯಲ್ಲಿ ಸಹಕರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಕೆ ನಾಯಕ್, ಸ್ಥಾಪನ ಸಮಿತಿಯ ಉಪಾಧ್ಯಕ್ಷರಾದ ಮನ್ಮಥ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ದಿವಾಕರ ದೇವಾಡಿಗ, ಹಾಗೂ ಶರತ್ ಶೆಟ್ಟಿ ಮದನಾಡು ಶೆಟ್ಟಿ ಉಪಸ್ಥಿತರಿದ್ದರು.