
ಬೆಳ್ತಂಗಡಿ : ಮೈಸೂರು ದಸರಾದಲ್ಲಿ ಕಂಬಳ ವೀಕ್ಷಿಸಿ ಬೈಕ್ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದ ಬೆಳ್ತಂಗಡಿ ತಾಲೂಕಿನ ಯುವಕನೋರ್ವ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಸಿದ್ಧಾರ್ಥನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಡೆದಿದೆ.
ಕಳೆಂಜ ಗ್ರಾಮದ ಕೊಳಂಬೆ ನಿವಾಸಿ ಮನೋಹರ (23) ಮೃತಪಟ್ಟ ಯುವಕ.
ಅ.18 ರಂದು ಸ್ನೇಹಿತ ದೀಕ್ಷಿತ್ ಜೊತೆ ಬೈಕ್ನಲ್ಲಿ ಮೈಸೂರಿಗೆ ತೆರಳಿ ದಸರಾ ವೀಕ್ಷಿಸಿ, ನಂತರ ಅದೇ ದಿನ ರಾತ್ರಿ ಬೆಂಗಳೂರಿಗೆ ವಾಪಾಸಾಗುತ್ತಿದ್ದ ಸಮಯದಲ್ಲಿ ಈ ಅಪಘಾತ ನಡೆದಿದೆ. ಮನೋಹರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬೈಕ್ನ ಹಿಂಬದಿ ಸವಾರ ಕೊಯ್ಯೂರಿನ ಬಿರ್ಕೆ ನಿವಾಸಿ ದೀಕ್ಷಿತ್ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
